
ಮೊಳಕಾಲ್ಮುರು: ರಾಜ್ಯ ದ್ರಾಕ್ಷಾರಸ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಬಿ. ಯೋಗೇಶ್‌ಬಾಬು ಅವರ ಅಧಿಕಾರ ಅವಧಿಯನ್ನು ಮುಂದುವರಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾನುವಾರ ವಿಜಯೋತ್ಸವ ಆಚರಿಸಿದರು.
ಎಲ್ಲಾ ರಂಗಗಳಲ್ಲಿ ಅತ್ಯಂತ ಹಿಂದುಳಿದಿರುವ ಮೊಳಕಾಲ್ಮುರು ಕ್ಷೇತ್ರಕ್ಕೆ ಸೂಕ್ತ ಸ್ಥಾನಮಾನಗಳು ಸಿಗದಿರುವುದು ಬೇಸರ ಸಂಗತಿ. ಆದರೆ, ಇದೇ ತಾಲ್ಲೂಕಿನ ಬಿ.ಜಿ. ಕೆರೆಯ ಯೋಗೇಶ್ ಬಾಬುಗೆ ವೈನ್ ಬೋರ್ಡ್ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಸಂತದ ತಂದಿತ್ತು. ಈಗ ಅವಧಿ ಮುಂದುವರಿಕೆ ಮಾಡಿರುವುದು ಸಂತೋಷದ ವಿಷಯ. ಇದು ಕ್ಷೇತ್ರದಲ್ಲಿ ಪಕ್ಷದ ಬೆಳೆವಣಿಗೆಗೆ ಅನುಕೂಲವಾಗಲಿದೆ. ಹಿಂದುಳಿದ ತಾಲ್ಲೂಕಿಗೆ ಗೌರವ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮುಖಂಡರು ಧನ್ಯವಾದ ತಿಳಿಸಿದರು.
ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮುಖಂಡರಾದ ಕೆ. ಜಗಳೂರಯ್ಯ, ಪಿ.ಎನ್. ಶ್ರೀನಿವಾಸುಲು, ಶರತ್, ಟಿ.ಎಸ್. ಪಾಲಯ್ಯ, ವೈ.ಡಿ. ಕುಮಾರಸ್ವಾಮಿ, ತಿಪ್ಪೇಶ್, ಸೈಯದ್ ಮೆಹಬೂಬ್ ಭಾಷಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.