ADVERTISEMENT

ಬದುಕಿನಲ್ಲಿ ಹಣ, ಶ್ರೀಮಂತಿಕೆಯೇ ಮುಖ್ಯವಲ್ಲ

ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶರಣರು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 6:05 IST
Last Updated 6 ಡಿಸೆಂಬರ್ 2020, 6:05 IST
ಚಿತ್ರದುರ್ಗದ ಮುರುಘಾಮಠದಲ್ಲಿ ಶನಿವಾರ ಸಾಮೂಹಿಕ ಕಲ್ಯಾಣ ಮಹೋತ್ಸವ ನೆರವೇರಿತು. ಶಿವಮೂರ್ತಿ ಮುರುಘಾ ಶರಣರು, ಎಂ. ರುದ್ರೇಶ್ ಇದ್ದರು.
ಚಿತ್ರದುರ್ಗದ ಮುರುಘಾಮಠದಲ್ಲಿ ಶನಿವಾರ ಸಾಮೂಹಿಕ ಕಲ್ಯಾಣ ಮಹೋತ್ಸವ ನೆರವೇರಿತು. ಶಿವಮೂರ್ತಿ ಮುರುಘಾ ಶರಣರು, ಎಂ. ರುದ್ರೇಶ್ ಇದ್ದರು.   

ಚಿತ್ರದುರ್ಗ: ‘ಬದುಕನ್ನು ಕಟ್ಟಿಕೊಳ್ಳಲು ಹಣ, ಶ್ರೀಮಂತಿಕೆಯೇ ಮುಖ್ಯವಲ್ಲ. ಪರೋಪಕಾರ ಗುಣ ಅಳವಡಿಸಿಕೊಂಡು, ಮೌಲ್ಯಯುತ ಜೀವನ ಸಾಗಿಸುವ ಮೂಲಕ ಹೃದಯವಂತರಾಗಬೇಕು’ ಎಂದು ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಮುರುಘಾಮಠ, ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ನಡೆದ
30ನೇ ವರ್ಷದ 12ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿ ಮಾತನಾಡಿದರು.

‘ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸಿದ ಕೀರ್ತಿ ಗ್ರಾಮೀಣ ಪ್ರದೇಶದ ಜನರಿಗೆ ಸಲ್ಲುತ್ತದೆ. ಸೌಂದರ್ಯ ಶಾಶ್ವತವಲ್ಲ. ಆದ್ದರಿಂದ ಪ್ರತಿಯೊಬ್ಬರೂ ಬದುಕಿನಲ್ಲಿ ಬಾಹ್ಯ ಶೃಂಗಾರಕ್ಕಿಂತಲೂ ಅಂತರಂಗವನ್ನು ಶೃಂಗರಿಸಿಕೊಳ್ಳಲು ಮುಂದಾಗಬೇಕು.ಪ್ರೇರಣೆ ಉಜ್ವಲ
ವಾದ ಬದುಕನ್ನು ಕಟ್ಟಿಕೊಡುತ್ತದೆ. ಬಸವಣ್ಣ ಅವರಿಗೂ ಶರಣ-ಶರಣೆಯರ ಪ್ರೇರಣೆಯಾಯಿತು. ಗುಡ್ಡಾಪುರದ ಶರಣೆ ದಾನಮ್ಮ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ಅನ್ನದಾಸೋಹ ನೆರವೇರಿಸುತ್ತ ಪ್ರೇರಣೆಯಾಗಿದ್ದಾರೆ. ಈ ಕಾರಣಕ್ಕಾಗಿ 12ನೇ ಶತಮಾನದ ಬಸವಾದಿ ಪ್ರಮಥರು ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ’ ಎಂದರು.

ADVERTISEMENT

ಸನ್ಮಾನ ಸ್ವೀಕರಿಸಿದ ಕೆಆರ್‌ಐಡಿಎಲ್ ನಿಗಮದ ಅಧ್ಯಕ್ಷ ಎಂ. ರುದ್ರೇಶ್, ‘ಮುರುಘಾಮಠದ ಹಲವು ಜನಪರ ಕಾರ್ಯಕ್ರಮಗಳು ಎಲ್ಲರಿಗೂ ಪ್ರೇರಣೆಯಾಗಿವೆ. ನಾವು ಎಷ್ಟೇ ದುಡಿದು, ಶ್ರೀಮಂತರಾದರೂ ಇನ್ನೊಬ್ಬರ ಹಸಿವಿಗೆ ಸ್ಪಂದಿಸಬೇಕು. ದೇಶದ ರಕ್ಷಣೆಗೆ ಸಿದ್ಧರಿರಬೇಕು’ ಎಂದು ಸಲಹೆ ನೀಡಿದರು.

ಕನಕಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಎಂ.ಟಿ. ಮಲ್ಲಿಕಾರ್ಜುನಸ್ವಾಮಿ ಇದ್ದರು. 2 ಜೋಡಿ ಅಂತರ್ಜಾತಿ ಸೇರಿ ಒಟ್ಟು 12 ಜೋಡಿಗಳ ಕಲ್ಯಾಣ ನೆರವೇರಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.