ADVERTISEMENT

ಚಳ್ಳಕೆರೆ: ಅಪಘಾತದಲ್ಲಿ ನವ ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 5:19 IST
Last Updated 20 ನವೆಂಬರ್ 2020, 5:19 IST
ಸುದೀಪ್ ಹಾಗೂ ಭವ್ಯ
ಸುದೀಪ್ ಹಾಗೂ ಭವ್ಯ    

ಚಳ್ಳಕೆರೆ (ಚಿತ್ರದುರ್ಗ): ತಾಲ್ಲೂಕಿನ ಗರಣಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ನವ ದಂಪತಿ ಮೃತಪಟ್ಟಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾಮದ ಸುದೀಪ್ (22) ಹಾಗೂ ಪತ್ನಿ ಭವ್ಯ (19) ಮೃತರು. ಸಂಬಂಧಿಕರ ಮದುವೆ ಮುಗಿಸಿ ಗುರುವಾರ ರಾತ್ರಿ ಗ್ರಾಮಕ್ಕೆ ಮರಳುವಾಗ ಘಟನೆ ಸಂಭವಿಸಿದೆ.

ದ್ವಿಚಕ್ರ ವಾಹನದಲ್ಲಿ ದಂಪತಿ ಚಳ್ಳಕೆರೆಯಿಂದ ಹಿರೇಹಳ್ಳಿ ಕಡೆ ಹೋಗುತ್ತಿದ್ದರು. ಈ ವೇಳೆ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದಂಪತಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಸಂಬಂಧ ತಳಕು ಪೋಲೀಸ್ ಠಾಣೆಯಲ್ಲಿ‌‌ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.