ADVERTISEMENT

ಭರಮಸಾಗರ: ದೊಡ್ಡಕೆರೆ ಏರಿ ಪರಿಶೀಲಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 6:04 IST
Last Updated 21 ಫೆಬ್ರುವರಿ 2022, 6:04 IST
ಭರಮಸಾಗರದ ದೊಡ್ಡಕೆರೆ ಏರಿಯನ್ನು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ಮಲ್ಲಿಕಾರ್ಜುನ ಗುಂಗೆ ಭಾನುವಾರ ಪರಿಶೀಲಿಸಿದರು.
ಭರಮಸಾಗರದ ದೊಡ್ಡಕೆರೆ ಏರಿಯನ್ನು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ಮಲ್ಲಿಕಾರ್ಜುನ ಗುಂಗೆ ಭಾನುವಾರ ಪರಿಶೀಲಿಸಿದರು.   

ಭರಮಸಾಗರ: ಬಿರುಕು ಬಿಟ್ಟ ಇಲ್ಲಿನದೊಡ್ಡಕೆರೆ ಏರಿಯನ್ನು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ಮಲ್ಲಿಕಾರ್ಜುನ ಗುಂಗೆ ಭಾನುವಾರ ಪರಿಶೀಲಿಸಿದರು.

ಹೊಸದಾಗಿ ವಿಸ್ತರಿಸಿ ಏರಿಯಲ್ಲಿ ಬಿರುಕುಬಿಟ್ಟ ಜಾಗದ ಬಳಿ 250 ಮೀಟರ್ ಉದ್ದ 14 ಆಳದವರೆಗೆ ಮಣ್ಣನ್ನು ತೆಗೆದು ನಂತರ ಮಧ್ಯದಲ್ಲಿ ವಿ ಆಕಾರದ ರಂಧ್ರ ಮಾಡಿ ಅದರಲ್ಲಿ ಕಪ್ಪು ಮಣ್ಣು ತುಂಬಿಸಿ ಅಕ್ಕಪಕ್ಕದಲ್ಲಿ ಕೆಂಪು ಮಣ್ಣು ಹಾಕಿ ಒಂದೊಂದು ಅಡಿ ಎತ್ತರಿಸಿ ಸಮತಟ್ಟು ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಬೇರುಗಳು ಏರಿಯ ಒಳಗೆ ಹೋಗಿ ನೀರು ಸೋರಿಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಏರಿ ಹಿಂಭಾಗದಲ್ಲಿ ಬೆಳೆದಿರುವ ಮರಗಳನ್ನು ತೆಗೆಸಿ ಹಾಕುವಂತೆ ಸೂಚಿಸಿದರು.

ADVERTISEMENT

ಎರಡು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯಿಂದ ಮುಳುಗು ತಜ್ಞರನ್ನು ಕರೆಯಿಸಿ ಇಟ್ಟಿಗೆ ಭಟ್ಟಿಯ ಸುಟ್ಟ ಹಗುರ ಮಣ್ಣನ್ನು ಏರಿ ಒಳಭಾಗದ ನೀರಿನಲ್ಲಿ ಸುರಿದು ನೀರು ಸೋರಿಕೆ ತಡೆಯಲು ಯತ್ನಿಸಲಾಗಿತ್ತು. ಆದರೆ ಪರಿಣಾಮ ಕಂಡುಬರದ ಕಾರಣ ಕಪ್ಪು ಮಣ್ಣನ್ನು ತರಿಸಿ ಏರಿಯ ಒಳಭಾಗಕ್ಕೆ ಸುರಿಯಲು ಅಧಿಕಾರಿಗಳು ಚಿಂತಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.