
ಧರ್ಮಪುರ: ಮನೆಯೇ ಮೊದಲ ಪಾಠಶಾಲೆಯಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು ಎಂದು ಶಿವು ಅಕಾಡೆಮಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಾರ್ಡ್‌ವೇರ್ ಶಿವಣ್ಣ ತಿಳಿಸಿದರು.
ಇಲ್ಲಿನ ಶಿವು ಅಕಾಡೆಮಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಿದೆ. ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಬೇಕು. ಮಕ್ಕಳ ಕಲಿಕೆಯ ಮೇಲೆ ಪಾಲಕರು ನಿಗಾ ವಹಿಸಬೇಕು ಎಂದರು.
ಮೊಬೈಲ್ ಗೀಳಿನಿಂದ ಆಗುತ್ತಿರುವ ಅನಾಹುತವನ್ನು ತಪ್ಪಿಸಬೇಕು. ಮಕ್ಕಳಲ್ಲಿ ಸಂಸ್ಕೃತಿ ಮತ್ತು ಉತ್ತಮ ಸಂಸ್ಕಾರ ಬೆಳೆಸಬೇಕು ಎಂದು ಪಂಚಲಿಂಗೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ವೀರಣ್ಣ ತಿಳಿಸಿದರು.
ಗ್ರಾ.ಪಂ.ಅಧ್ಯಕ್ಷೆ ನೂರ್‌ಜಾನ್ ಅಮಾನುಲ್ಲಾ, ಉಪಾಧ್ಯಕ್ಷೆ ಮಂಜಮ್ಮ, ಸದಸ್ಯೆ ಜ್ಯೋತಿ ಹನುಮಂತರಾಯ, ಅಸ್ಲಾಂಖಾನ್, ಶಿಕ್ಷಣ ಇಲಾಖೆಯ ಬಸವರಾಜು, ನೌಷದ್ ಖಾನ್, ಪವಿತ್ರಾ, ಲಕ್ಷ್ಮಿದೇವಿ, ಹನುಮಂತರಾಯ, ಶಬೀನಾ, ರಾಜೇಶ್, ರತ್ನಮ್ಮ, ವನಜಾಕ್ಷಿ, ಆದರ್ಶಗೌಡ, ಆದಿತ್ಯಗೌಡ, ನಯನಾ, ಸ್ನೇಹಾ, ಕೋಟಿಲಿಂಗಯ್ಯ, ಮಂಜುನಾಥ್, ಮುಖ್ಯ ಶಿಕ್ಷಕ ಶಿವಕುಮಾರ್, ನರೇಂದ್ರ, ಗಾಯಿತ್ರಿ, ತಿಪ್ಪೇಶ್ ಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.