ADVERTISEMENT

ಆಟದ ಮೈದಾನದ ವಿಚಾರ: ಘರ್ಷಣೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 5:19 IST
Last Updated 15 ಏಪ್ರಿಲ್ 2021, 5:19 IST

ಚಳಮಡು (ಹಿರಿಯೂರು): ಚಳಮಡು ಗ್ರಾಮದಲ್ಲಿಸೋಮವಾರ ರಾತ್ರಿಯುಗಾದಿ ಹಬ್ಬದ ಪ್ರಯುಕ್ತ ಕ್ರಿಕೆಟ್ ಟೂರ್ನಿ ನಡೆಸುವ ಮೈದಾನದ ವಿಚಾರಕ್ಕೆ ಒಂದೇ ಜನಾಂಗದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

ಗ್ರಾಮದಲ್ಲಿ ತಿರುಮಲ ಕ್ರಿಕೆಟರ್ಸ್ ಹೆಸರಿನಲ್ಲಿ ಏ.14 ಮತ್ತು 15ರಂದು ‘ಚಳ್ಳಮಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ’ ಆಯೋಜಿಸಲಾಗಿತ್ತು. ಕ್ರಿಕೆಟ್ ಆಡಿಸಲು ಕೆಲವರು ಉಳುಮೆ ಮಾಡಿಕೊಂಡಿದ್ದ ಸರ್ಕಾರಿ ಜಮೀನಿನನ್ನು ಬಿಟ್ಟುಕೊಡುವಂತೆ ಕೇಳಿದ್ದೇ ಗಲಭೆಗೆ ಮೂಲ ಎನ್ನಲಾಗಿದೆ.

ಗಲಭೆಯಲ್ಲಿ ಗಾಯಗೊಂಡವರನ್ನು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿಗೆ ಬಂದ ಮೇಲೂ ಆಸ್ಪತ್ರೆ ಆವರಣದಲ್ಲಿ ಎರಡು ಗುಂಪಿನವರು ಮತ್ತೆ ಕೈಕೈ ಮಿಲಾಯಿಸಿದ್ದಾರೆ. ಈ ಸಂಬಂಧ ಆಸ್ಪತ್ರೆಯ ಡಾ.ಅಶ್ವಿನಿ ಅವರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎರಡೂ ಗುಂಪಿನವರು ದೂರು-ಪ್ರತಿದೂರು ಕೊಟ್ಟಿದ್ದು, ಗಲಭೆಗೆ ಸಂಬಂಧಿಸಿದ ಮೂರು ಪ್ರಕರಣಗಳು ದಾಖಲಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.