ADVERTISEMENT

ಲಸಿಕಾ ಕಾರ್ಯಕರ್ತರಿಗೆ ಪೋಲಿಯೊ ಕ್ಯಾಪ್ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:51 IST
Last Updated 20 ಡಿಸೆಂಬರ್ 2025, 6:51 IST
   

ಹೊಸದುರ್ಗ: ಶಾಸಕ ಬಿ.ಜಿ. ಗೋವಿಂದಪ್ಪ ಅವರು ರಾಷ್ಟ್ರೀಯ ಪೋಲಿಯೋ ದಿನದಂದು ಲಸಿಕೆ ನೀಡುವವರು ಬಿಸಿಲಿನ ತಾಪ ತಾಗದಿರಲೆಂದು 400 ಕ್ಕೂ ಅಧಿಕ ಪೋಲಿಯೋ ಕ್ಯಾಪ್ ನೀಡಿದ್ದು, ಶುಕ್ರವಾರ ಕಾಂಗ್ರೆಸ್ ಮುಖಂಡ ಅರುಣ್ ಗೋವಿಂದಪ್ಪ ವಿತರಿಸಿದರು.

'ಪಲ್ಸ್ ಪೋಲಿಯೋ ಹಾಕಲು 15063 ಮಕ್ಕಳನ್ನು ಗುರುತಿಸಲಾಗಿದೆ. ಡಿ. 21 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೂತ್ ಮಟ್ಟದಲ್ಲಿ ಪಲ್ಸ್ ಪೋಲಿಯೋ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿದೆ. ಡಿ. 22 ರಿಂದ 24 ವರೆಗೆ ಮನೆ ಮನೆಗೆ ಭೇಟಿ ನೀಡಿ, ಪೋಲಿಯೋ ಹನಿ ನೀಡಲಾಗುವುದು. ಈ ಕುರಿತು ಸಿಬ್ಬಂದಿಗಳು, ವಾಹನಗಳ ನಿಯೋಜನೆ, ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ವೈದ್ಯ ರಾಘವೇಂದ್ರ ಪ್ರಸಾದ್ ತಿಳಿಸಿದರು.'

ಈ ವೇಳೆ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ರಾಕೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ಸಿದ್ಧರಾಮಪ್ಪ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಾಗಳು,ಆಶಾ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ಸೇರಿದಂತೆ ಹಲವರಿದ್ದರು.