ADVERTISEMENT

ನ್ಯಾಯಾಲಯ ಇತಿಹಾಸದಲ್ಲಿ ತ್ವರಿತ ವಿಚಾರಣೆ: ಪತ್ನಿ ಹಂತಕನಿಗೆ 11 ದಿನದಲ್ಲಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 13:00 IST
Last Updated 7 ಜುಲೈ 2018, 13:00 IST
   

ಚಿತ್ರದುರ್ಗ: ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದ ವಿಚಾರಣೆಯನ್ನು 11 ದಿನಗಳಲ್ಲಿ ಪೂರ್ಣಗೊಳಿಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಅಪರಾಧಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ಆದೇಶ ನೀಡಿತು.

ಇದು ನ್ಯಾಯಾಲಯದ ಇತಿಹಾಸದ ಅಪರೂಪದ ಆದೇಶವನ್ನು ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ನೀಡಿದ್ದಾರೆ. ಇದುವರೆಗೂ 23 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಶಿಕ್ಷೆ ಪ್ರಕಟಿಸಿದ ದಾಖಲೆ ಉತ್ತರಪ್ರದೇಶದಲ್ಲಿದೆ.

ಚಳ್ಳಕೆರೆ ತಾಲ್ಲೂಕಿನ ವಲಸೆ ಗ್ರಾಮದ ಪರಮೇಶ್ವರಪಸ್ವಾಮಿ (75) ಶಿಕ್ಷೆಗೆ ಗುರಿಯಾದ ಅಪರಾಧಿ. ಪತ್ನಿ ಪುಟ್ಟಮ್ಮ (63) ಎಂಬುವರ ಜೂನ್‌ 27ರಂದು ಹತ್ಯೆ ಮಾಡಿದ್ದನು.

ADVERTISEMENT

ಪತ್ನಿಯ ಶೀಲ ಶಂಕಿಸಿದ ಪತಿ ನಿತ್ಯ ಜಗಳ ಮಾಡುತ್ತಿದ್ದನು. ಜೂನ್‌ 27ರಂದು ರಾತ್ರಿ ಈ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿತ್ತು. ದಂಪತಿಯ ಪುತ್ರ ಸೇರಿ 17 ಸಾಕ್ಷ್ಯಗಳನ್ನು ನ್ಯಾಯಾಲಯ ವಿಚಾರಣೆಗೆ ಒಳಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.