ADVERTISEMENT

ನಾಯಕನಹಟ್ಟಿ: ವಾರ್ಡ್‌ವಾರು ಮೀಸಲಾತಿ ಪ್ರಕಟಿಸಿ ಆದೇಶ

ಪ.ಪಂ. ಸದಸ್ಯರ ಅಧಿಕಾರ ಅವಧಿ 30ಕ್ಕೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 4 ಮೇ 2021, 5:12 IST
Last Updated 4 ಮೇ 2021, 5:12 IST
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಚೇರಿ
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಚೇರಿ   

ನಾಯಕನಹಟ್ಟಿ: ಪಟ್ಟಣ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಇದೇ 30ಕ್ಕೆ ಕೊನೆಯಾಗಲಿದ್ದು, ವಾರ್ಡ್ ಚುನಾವಣೆಗೆ ಪೂರ್ವಭಾವಿಯಾಗಿ ಸರ್ಕಾರ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.

ಏಪ್ರಿಲ್ 29ರಂದು ಕರ್ನಾಟಕ ರಾಜ್ಯಪತ್ರದಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯು 16 ವಾರ್ಡ್‌ಗಳನ್ನು ಹೊಂದಿದ್ದು, 2016ರಲ್ಲಿ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿದ್ದರು. ಈ ಸದಸ್ಯರ ಅಧಿಕಾರ ಅವಧಿ ಇದೇ ತಿಂಗಳ 30ಕ್ಕೆ ಕೊನೆಯಾಗಲಿದೆ. ಹಾಗಾಗಿ ಸರ್ಕಾರ ಹಿಂದೆ ಇದ್ದ ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಬದಲಾಯಿಸಿ ಆದೇಶಿಸಿದೆ. ಮೀಸಲಾತಿಗೆ ಸಂಬಂಧಪಟ್ಟಂತೆ ಆಕ್ಷೇಪಣೆಗಳಿಗೆ 7 ದಿನಗಳ ಕಾಲಾವಕಾಶ ನೀಡಿದೆ.

ADVERTISEMENT

ಮೀಸಲಾತಿ ವಿವರ: ವಾರ್ಡ್‌ 1– ಪರಿಶಿಷ್ಟ ಜಾತಿ, ವಾರ್ಡ್‌ 2– ಸಾಮಾನ್ಯ, ವಾರ್ಡ್‌ 3–ಸಾಮಾನ್ಯ, ವಾರ್ಡ್‌ 4– ಪರಿಶಿಷ್ಟ ಜಾತಿ (ಮ), ವಾರ್ಡ್‌ 5– ಪರಿಶಿಷ್ಟ ಪಂಗಡ, ವಾರ್ಡ್‌ 6– ಪರಿಶಿಷ್ಟ ಪಂಗಡ (ಮ), ವಾರ್ಡ್‌ 7– ಸಾಮಾನ್ಯ, ವಾರ್ಡ್‌ 8– ಸಾಮಾನ್ಯ (ಮ), ವಾರ್ಡ್‌ 9– ಸಾಮಾನ್ಯ, ವಾರ್ಡ್‌ 10– ಸಾಮಾನ್ಯ (ಮ), ವಾರ್ಡ್‌ 11– ಪರಿಶಿಷ್ಟ ಪಂಗಡ (ಮ), ವಾರ್ಡ್‌ 12– ಪರಿಶಿಷ್ಟ ಪಂಗಡ, ವಾರ್ಡ್‌ 13– ಸಾಮಾನ್ಯ (ಮ), ವಾರ್ಡ್‌ 14– ಪರಿಶಿಷ್ಟ ಪಂಗಡ (ಮ), ವಾರ್ಡ್‌ 15– ಸಾಮಾನ್ಯ (ಮ), ವಾರ್ಡ್‌ 16– ಪರಿಶಿಷ್ಟ ಪಂಗಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.