ADVERTISEMENT

ಸೊಂಡೆಕೆರೆ: ಗೊರವರ ದೋಣಿ ಪೂಜೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 5:11 IST
Last Updated 15 ಏಪ್ರಿಲ್ 2021, 5:11 IST
ಹಿರಿಯೂರು ತಾಲ್ಲೂಕಿನ ಸೊಂಡೆಕೆರೆ ಗ್ರಾಮದ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಬುಧವಾರ ದೋಣಿಪೂಜೆ ಸೇವೆಯನ್ನು ಗೊರವರು ನೆರವೇರಿಸಿದರು
ಹಿರಿಯೂರು ತಾಲ್ಲೂಕಿನ ಸೊಂಡೆಕೆರೆ ಗ್ರಾಮದ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಬುಧವಾರ ದೋಣಿಪೂಜೆ ಸೇವೆಯನ್ನು ಗೊರವರು ನೆರವೇರಿಸಿದರು   

ಸೊಂಡೆಕೆರೆ (ಹಿರಿಯೂರು): ಸೊಂಡೆಕೆರೆ ಗ್ರಾಮದ ಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಬುಧವಾರ ದೋಣಿಪೂಜೆ ಸೇವೆಯನ್ನು ಗೊರವರು ನೆರವೇರಿಸಿದರು.

ಹಲವು ದಶಕಗಳಿಂದ ಯುಗಾದಿ ಚಂದ್ರದರ್ಶನದ ಮರುದಿನ ಬೆಳಿಗ್ಗೆ 8ರಿಂದ 10.30ರವರೆಗೆ ದೋಣಿ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ.

ಜನ–ಜಾನುವಾರಿಗೆ ಹೊಸ ವರ್ಷದಲ್ಲಿ ರೋಗಗಳು ಬರದಂತೆ ದೇವರು ಕಾಪಾಡಲಿ ಎಂಬುದು ಪೂಜೆಯ ಉದ್ದೇಶ ಎಂದು ಗ್ರಾಮದ ಮುಖಂಡ ಮಂಜುನಾಥ್ ತಿಳಿಸಿದರು.

ADVERTISEMENT

ನವರಂಗ ಕಲ್ಲುಗಳು ಜೋಡಣೆ: ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಂಚಾಂಬದೇವಿ ದೇವಸ್ಥಾನದ ಗರ್ಭಗುಡಿ ನವರಂಗದ ಕಲ್ಲುಗಳನ್ನು ಯಂತ್ರ ಬಳಸಿ ಜೋಡಿಸಲಾಯಿತು. ದೇವಸ್ಥಾನ ಸಮಿತಿಯವರು, ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.