ADVERTISEMENT

ಚಿತ್ರದುರ್ಗ: ಗುಡುಗು ಸಹಿತ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 5:15 IST
Last Updated 15 ನವೆಂಬರ್ 2021, 5:15 IST

ಚಿತ್ರದುರ್ಗ: ಜಿಲ್ಲೆಯಲ್ಲಿ ಮೂರು ದಿನಗಳಿಂದ ಸೋನೆಯಂತೆ ಸುರಿಯುತ್ತಿದ್ದ ಮಳೆ ಭಾನುವಾರ ರಾತ್ರಿಯಿಂದ ಬಿರುಸು ಪಡೆಯಿತು. ಗುಡುಗು ಸಹಿತ ಉತ್ತಮ ಮಳೆ ಸುರಿಯಿತು.

ರಾತ್ರಿ 8ಕ್ಕೆ ಆರಂಭವಾದ ಮಳೆ ನಿಧಾನವಾಗಿ ಬಿರುಸು ಪಡೆಯಿತು. ಗುಡುಗು ಸಹಿತ ಸುರಿದ ಬಿರುಸಿನ ಮಳೆಗೆ ಎಲ್ಲೆಡೆ ನೀರು ಹರಿಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಅನೇಕರು ಭಯದಲ್ಲಿ ರಾತ್ರಿ ಕಳೆಯಬೇಕಾಯಿತು.

ಮೂರು ದಿನಗಳಿಂದ ಜಿಲ್ಲೆಯಲ್ಲಿ ಸೋನೆಯಂತೆ ಮಳೆ ಸುರಿದಿದೆ. ಭಾನುವಾರ ಬೆಳಿಗ್ಗೆ ಮೋಡ ಮುಸುಕಿದ ವಾತಾವರಣ ಇದ್ದರೂ ಮಳೆ ಧರೆಗೆ ಇಳಿದಿರಲಿಲ್ಲ. ಹೊಸದುರ್ಗ ತಾಲ್ಲೂಕು ಹೊರತುಪಡಿಸಿ ಉಳಿದೆಡೆ ಮಳೆಯ ಸುಳಿವು ಕಾಣಿಸಿಕೊಂಡಿರಲಿಲ್ಲ. ಜಿಲ್ಲೆಯ ಕೆಲ ಭಾಗಗಳಲ್ಲಿ ಬಿರು ಬಿಸಿಲಿತ್ತು.

ADVERTISEMENT

ಸಂಜೆಯ ಬಳಿಕ ವಾತಾವರಣ ಬದಲಾಯಿತು. ಆಗಸದಲ್ಲಿ ಕಾಣಿಸಿಕೊಂಡ ದಟ್ಟ ಮೋಡಗಳು ವರುಣನ ಮುನ್ಸೂಚನೆ ನೀಡಿದವು. ಗುಡುಗು ಕಾಣಿಸಿಕೊಂಡ ಬಳಿಕ ಮಳೆ ಆರಂಭವಾಯಿತು. ಸಮಯ ಕಳೆದಂತೆ ಮಳೆ ಬಿರುಸು ಪಡೆಯಿತು. ಆಗಾಗ ಬಿಡುವು ನೀಡುತ್ತ ಬಿರುಸಿನಿಂದ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.