
ಚಳ್ಳಕೆರೆ: ತಾಲ್ಲೂಕಿನ ಗೊರ್ಲತ್ತು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 20 ವಿದ್ಯಾರ್ಥಿಗಳಿಗೆ ದೆಹಲಿ ಪ್ರವಾಸ ಭಾಗ್ಯ ದೊರೆತಿದೆ.
ಜ. 7ರಂದು ಬೆಳಿಗ್ಗೆ ಬೆಂಗಳೂರಿನಿಂದ ದೆಹಲಿಗೆ ವಿಮಾನದ ಮೂಲಕ ವಿದ್ಯಾರ್ಥಿಗಳು ಪ್ರವಾಸ ಬೆಳೆಸಲಿದ್ದಾರೆ. ಜಿಲ್ಲೆಯ ಶಾಲೆ ವಿದ್ಯಾರ್ಥಿಗಳ ದೆಹಲಿ ಪ್ರಥಮ ಪ್ರವಾಸ ಇದಾಗಿದೆ.
ಶಾಸಕ ಟಿ.ರಘುಮೂರ್ತಿ ₹ 25,000, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಗ್ರಾಮದ ಮುಖಂಡ ಗೋವರ್ಧನ್, ಟೊಮೆಟೊ ಶ್ರೀನಿವಾಸ್, ವೀರೇಶ್, ಬಾನು ನಿಲಯ ವೀರೇಶ್, ನಿಜಲಿಂಗಪ್ಪ, ಶಶಿಕುಮಾರ್ ತಲಾ ₹ 10,000, ಜಯರಾಮಣ್ಣ ₹ 30,000 ಮತ್ತು ಎಲ್‍ಐಸಿ ನಾಗರಾಜ, ಮಂಜುನಾಥ, ರಂಗನಾಥ್, ಚಿದಾನಂದಪ್ಪ, ಹನುಮಂತರಾಯ, ದೇವರಾಜ ತಲಾ ₹ 5,000, ಉಮೇಶ್, ಶೇಖರ್ ತಲಾ ₹ 4,000, ಶಶಿಧರ್, ರಾಜು ತಲಾ ₹ 2,000 ಪ್ರವಾಸಕ್ಕೆ ಆರ್ಥಿಕ ನೆರವು ನೀಡಿದ್ದಾರೆ.
‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಉಚಿತ ಊಟದ ವ್ಯವಸ್ಥೆ, ರಾಷ್ಟ್ರಪತಿ ಭವನ, ಕೆಂಪುಕೋಟೆ ಪ್ರವೇಶಕ್ಕೆ ಅವಕಾಶ ಮತ್ತು ಐಎಎಸ್ ಅಧಿಕಾರಿ ಕೃಪಾಕರ್ ಅವರು ರಾತ್ರಿ ವೇಳೆ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಶಾಲೆ ಎಸ್‍ಡಿಎಂ ಸಮಿತಿ ಅಧ್ಯಕ್ಷರು, ಸದಸ್ಯರು ಪ್ರವಾಸಕ್ಕೆ ಸಹಕಾರ ನೀಡಿದ್ದಾರೆ’ ಎಂದು ಶಾಲೆ ಮುಖ್ಯಶಿಕ್ಷಕ ನಿಜಲಿಂಗಪ್ಪ, ಶ್ರವಣಗೆರೆ ಎಚ್.ಕುಮಾರಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.