ADVERTISEMENT

ಪರಶುರಾಂಪುರ ಹೋಬಳಿ ಪ್ರವೇಶಿಸಿದ ವಿ.ವಿ ಸಾಗರದ ನೀರು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 3:09 IST
Last Updated 27 ಏಪ್ರಿಲ್ 2021, 3:09 IST
ಪರಶುರಾಂಪುರ ಹೋಬಳಿ ಕಲಮರಹಳ್ಳಿ ಬ್ಯಾರೇಜ್ ತುಂಬಿ ಸೋಮವಾರ ಬೊಂಬೆರಹಳ್ಳಿ ಬ್ಯಾರೇಜ್ ಕಡೆ ಹರಿಯುತ್ತಿರುವ ವಾಣಿ ವಿಲಾಸ ಸಾಗರದ ನೀರು.
ಪರಶುರಾಂಪುರ ಹೋಬಳಿ ಕಲಮರಹಳ್ಳಿ ಬ್ಯಾರೇಜ್ ತುಂಬಿ ಸೋಮವಾರ ಬೊಂಬೆರಹಳ್ಳಿ ಬ್ಯಾರೇಜ್ ಕಡೆ ಹರಿಯುತ್ತಿರುವ ವಾಣಿ ವಿಲಾಸ ಸಾಗರದ ನೀರು.   

ಪರಶುರಾಂಪುರ: ವಾಣಿ ವಿಲಾಸ ಸಾಗರದ ನೀರು ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಹೋಬಳಿ ವೇದಾವತಿ ನದಿ ಪಾತ್ರವನ್ನು ಸೋಮವಾರ ಪ್ರವೇಶಿಸಿದ್ದು ಕಲಮರಹಳ್ಳಿ ಬ್ಯಾರೇಜ್ ತುಂಬಿ, ಬೊಂಬೆರಹಳ್ಳಿ ಬ್ಯಾರೇಜ್‌ನಲ್ಲಿ 3 ಅಡಿಯಷ್ಟು ನೀರು ಶೇಖರಣೆಯಾಗಿದೆ. ಬುಧವಾರ ಸಂಜೆ ವೇಳೆಗೆ ಚೌಳೂರು ಬ್ಯಾರೇಜ್ ತಲುಪಲಿದೆ.

ವೇದಾವತಿ ನದಿಯ ನೀರು ಹೋಬಳಿಯ ಕಲಮರಹಳ್ಳಿ ಪ್ರವೇಶಿಸುತ್ತಿದ್ದಂತೆ ರೈತರು, ಯುವಕರು ತಂಡೋಪ ತಂಡವಾಗಿ ಬಂದು ವೀಕ್ಷಿಸಿದರು. ಜೊತೆಗೆ ಬಿಸಿಲಿನ ಝಳ ಹೆಚ್ಚಿರುವ ಕಾರಣ ನೀರಿನಲ್ಲಿ ಈಜಾಡಿ ಸಂತಸಪಟ್ಟರು.

ಕಳೆದ ವರ್ಷದಿಂದ ನೀರು ಹರಿಸುತ್ತಿರುವುದರಿಂದ ನದಿ ಪಾತ್ರದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಜೊತೆಗೆ ಕುರಿಗಾಹಿಗಳು ಮೇವು, ನೀರು ಅರಸಿ ವಲಸೆ ಹೋಗುವುದನ್ನು ನಿಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.