ADVERTISEMENT

ಎಸ್‌ಎಸ್‌ಬಿ ಯೋಧರಿಗೆ ಜಿಲ್ಲೆಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 9:44 IST
Last Updated 22 ಏಪ್ರಿಲ್ 2013, 9:44 IST

ವಿಟ್ಲ: ಚುನಾವಣೆಯ ಭದ್ರತೆಗಾಗಿ ವಿಟ್ಲಕ್ಕೆ ಆಗಮಿಸಿದ ಎಸ್‌ಎಸ್‌ಬಿ  (ಸಶಸ್ತ್ರ ಸೀಮಾ ಬಲ) ಯೋಧರಿಗೆ ಎಸ್.ಪಿ. ಅಭಿಷೇಕ್ ಗೋಯಲ್ ಮಾರ್ಗದರ್ಶನದಂತೆ ಜಿಲ್ಲೆಯ ಸಮಗ್ರ ಮಾಹಿತಿ ಒಳಗೊಂಡ ವಿಡಿಯೋ ಚಿತ್ರಣವನ್ನು ಶನಿವಾರ ತೋರಿಸಲಾಯಿತು.

ವಿಟ್ಲದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ ಹೂಡಿರುವ ಅಸಿಸ್ಟೆಂಟ್ ಕಮಾಂಡರ್ ಅಸೀಮ್ ಉಪಾಧ್ಯಾಯ ಅವರ ನೇತೃತ್ವದಲ್ಲಿ 100 ಮಂದಿಯ ತುಕಡಿ ಬಂದಿಳಿದಿದೆ.

ಭಾರತ ನೇಪಾಳ ಗಡಿ ಭಾಗದ ಸಿಕ್ಕಿಂನಿಂದ ಬಂದಿಳಿದ ಯೋಧರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ದೇವಾಲಯಗಳ ಮಾಹಿತಿ, ವಿಧಾನಸಭಾ ಕ್ಷೇತ್ರದ ಮತ್ತು ಶಾಸಕರ ಮಾಹಿತಿ, ಜಿಲ್ಲೆಯಲ್ಲಿರುವ ಒಟ್ಟು ಮತಗಟ್ಟೆಗಳ ಸಂಖ್ಯೆ ಯಾವ ಮತಗಟ್ಟೆಯಲ್ಲಿ ಹೆಚ್ಚಿನ ಭದ್ರತೆ ಅಗತ್ಯವಾಗಿರುತ್ತದೆ ಎಂಬ ಮಾಹಿತಿಗಳನ್ನು ನೀಡಲಾಯಿತು.ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಮತ್ತು ಪೊಲೀಸ್ ರಾಮಚಂದ್ರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.