ADVERTISEMENT

ಮುಡಿಪು: ಮಹಿಳಾ ದೌರ್ಜನ್ಯ ತಡೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 11:20 IST
Last Updated 6 ಡಿಸೆಂಬರ್ 2013, 11:20 IST

ಮುಡಿಪು: ದೌರ್ಜನ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ನಾವೆಲ್ಲರೂ ಕಂಕಣ ಬದ್ಧರಾಗಿ ಹೋರಾಡೋಣ. ಪ್ರಪ್ರಥ­ಮ­ವಾಗಿ ನಮ್ಮ ಮನೆ, ಪರಿಸರಗಳನ್ನು ದೌರ್ಜನ್ಯದಿಂದ ಮುಕ್ತಗೊಳಿಸಿ ಗಾಂಧೀಜಿಯವರ ‘ರಾಮರಾಜ್ಯದ ಕನಸು’ ನನಸಾಗಿಸೋಣ ಎಂದು ಮೇರ­ಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಸುಗ್ರಾಮ ಒಕ್ಕೂಟದ ಜಿಲ್ಲಾ ಪ್ರತಿನಿಧಿ ವೃಂದಾ ಅವರು ಹೇಳಿದರು.

ಅವರು ಬುಧವಾರ ಮೇರಮಜಲು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಮಹಿಳಾ ದೌರ್ಜನ್ಯ ತಡೆ ಅಭಿಯಾನದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ದಿಹಂಗರ್ ಪ್ರಾಜೆಕ್ಟ್‌ನ ಲೆಕ್ಕ ಪರಿಶೋಧಕ ವೇದವ್ಯಾಸ ಪರ್ಗಿ ಅವರು ಮಾತನಾಡಿ ಮಹಿಳಾ ದೌರ್ಜ­ನ್ಯ­ದ ತಡೆಗೆ ಪ್ರತಿಯೊಬ್ಬರು ಎಚ್ಚತ್ತು­ಕೊಳ್ಳುವ ಅವಶ್ಯಕತೆಯಿದೆ. ಮಹಿಳೆ­ಯರು ದೌರ್ಜನ್ಯದ ವಿರುದ್ಧ ಹೋರಾ­ಡಲು ಸಂಘಟಿತರಾಗಬೇಕು ಎಂದರು.

ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಅವರು ಮಹಿ­ಳಾ ದೌರ್ಜನ್ಯ­ದ ವಿರುದ್ಧ ಹೋರಾ­ಡಲು ಸಂಘಟಿತ­ರಾಗುವಂತೆ ಕೋರಿ­ದ­ರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿ­ಸಿದ ವತ್ಸಲಾ ನಾಯಕ್ ಅವರು ಮಹಿಳೆಯರಿಗೆ ಉಂಟಾಗುತ್ತಿರುವ ದೌರ್ಜನ್ಯವನ್ನು ತಿಳಿಸಿದರು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಲಾಲ್ ಶರವಣ್, ಮಾಜಿ ಅಧ್ಯಕ್ಷ­ರಾದ ಯೋಗೀಶ್, ಮಹಮ್ಮದ್ ಉಪಸ್ಥಿತ­ರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.