ತೋಕೂರು(ಮೂಲ್ಕಿ): ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಬದುಕಲು ನ್ಯಾಯಯುತವಾಗಿ ದೈನಂದಿನ ಜೀವನದಲ್ಲಿ ನಿಷ್ಠೆ ಪ್ರಾಮಾಣಿಕತೆ ಹೊಂದಬೇಕು. ಮಾದಕ ದ್ರವ್ಯ ಇನ್ನಿತರ ಕೆಟ್ಟ ಚಟಗಳಿಂದ ದೂರ ಉಳಿದು ಸುಸಂಸ್ಕೃತ ಯುವ ಶಕ್ತಿಯನ್ನು ಸಮಾಜದ ಶಕ್ತಿಯನ್ನಾಗಿ ನಿರ್ಮಾಣ ಮಾಡಲು ಶಿಕ್ಷಣ ಸಂಸ್ಥೆಯೇ ಸಮರ್ಥವಾಗಿದೆ ಎಂದು ಮೂಲ್ಕಿ ಠಾಣೆ ಸಬ್ ಇನ್‌ಸ್ಪೆಕ್ಟರ್ ಸುನೀಲ್ ಪಾಟೀಲ್ ಹೇಳಿದರು.
ಮೂಲ್ಕಿ ಬಳಿಯ ತೋಕೂರು ತಪೋವನದ ನಿಟ್ಟೆ ವಿದ್ಯಾ ಸಂಸ್ಥೆಯ ರಾಮಕೃಷ್ಣ ಪೂಂಜಾ ಐಟಿಐ ಕೇಂದ್ರದಲ್ಲಿ ಶನಿವಾರ ಮಾದಕ ದ್ರವ್ಯ ಮತ್ತು ಕಳ್ಳತನದ ಬಗ್ಗೆ ಮಾಹಿತಿ ನೀಡಿದರು.ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಜಯರಾಂ ಪೂಂಜಾ ಅಧ್ಯಕ್ಷತೆ ವಹಿಸಿದ್ದರು.
ಕಿನ್ನಿಗೋಳಿಯ ರೋಟರಿ ಕ್ಲಬ್, ಇನ್ನರ್‌ವ್ಹೀಲ್ ಕ್ಲಬ್, ರೋಟರ‌್ಯಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೋವರ್ಸ್ ಕ್ಲಬ್ ಮತ್ತು ಮೂಲ್ಕಿ ಆರಕ್ಷಕ ಠಾಣೆ ಸಂಯೋಜನೆಯ ಮಾಹಿತಿ ಶಿಬಿರದಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿನ ಕೆಟ್ಟ ಪರಿಸರಕ್ಕೆ ದಾಸರಾಗದೇ ಉತ್ತಮ ಸಮಾಜವನ್ನು ಕಟ್ಟುತ್ತೇವೆ ಎಂದು ಪ್ರಮಾಣ ಮಾಡಿದರು.
ಪ್ರಾಂಶುಪಾಲ ವೈ.ಎನ್.ಸಾಲಿಯಾನ್, ರೋಟರಿ ಕಾರ್ಯದರ್ಶಿ ಯಶವಂತ ಐಕಳ, ರೋಟರ‌್ಯಾಕ್ಟ್ ಇನ್ನರ್‌ವ್ಹೀಲ್ ಅಧ್ಯಕ್ಷೆ ಜಾನೆಟ್ ರೊಜಾರಿಯೋ ಮುಖ್ಯ ಅತಿಥಿಯಾಗಿದ್ದರು.
ಶಿಕ್ಷಕ ರಘುರಾಮರಾವ್, ಎಸ್. ಸುರೇಶ್, ಎಚ್. ಹರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.