ಸಾಂದರ್ಭಿಕ ಚಿತ್ರ
ಕಾಸರಗೋಡು: ಆಫ್ರಿಕಾದಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ಸರಕು ಸಾಗಾಣಿಕೆ ಹಡಗಿನಲ್ಲಿದ್ದ ಕಾಸರಗೋಡು ನಿವಾಸಿ ಸಹಿತ 10 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಪನೆಯಾಲ್ ಅಂಬಂಘಾಡು ಕೋಟಪಾರಾಯಿ ನಿವಾಸಿ ರಜೀಂದ್ರನ್ ಭಾರ್ಗವನ್ ಸೇರಿದಂತೆ ಹತ್ತು ಮಂದಿ ಹಡಗಿನಲ್ಲಿದ್ದರು. ಇವರೆಲ್ಲ ಹಡಗಿನ ಸಿಬ್ಬಂದಿ. 28 ದಿನಗಳ ಬಳಿಕ ಅಪಹರಣಕಾರರು ಇವರನ್ನು ಬಿಡುಗಡೆ ಮಾಡಿದ್ದಾರೆ. ಆಫ್ರಿಕಾದ ರೋಮಾ ಬಂದರಿನಿಂದ ಹೊರಟಿದ್ದ ವೀಟೂ ಎಂಬ ಹೆಸರಿನ ಈ ಹಡಗನ್ನು ಮಾ.17ರಂದು ಕಡಲ್ಗಳ್ಳರು ಅಪಹರಿಸಿದ್ದರು. ಕೇರಳದ ಆಸಿಫ್ ಆಲಿ, ತಮಿಳುನಾಡಿನ ಪ್ರದೀಪ್ ಮುರುಗನ್, ಸತೀಶ್ ಕುಮಾರ್ ಸೆಲ್ವರಾಜ್, ಬಿಹಾರದ ಸಂದೀಪ್ ಕುಮಾರ್ ಸಿಂಗ್, ಮಹಾರಾಷ್ಟ್ರದ ಝಮೀರ್ ಜಾವೇದ್, ಸೋಲ್ಕರ್ ರಿಹಾನ್ ಬಬೀರ್ ಮತ್ತು ಮೂವರು ವಿದೇಶಿಯರು ಹಡಗಿನಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.