ಕಾಸರಗೋಡು: ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆದ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಗೆ ಸೋಮವಾರ ತೆರೆಬಿತ್ತು. ಕ್ಷೇತ್ರದಲ್ಲಿ ಕಳೆದ 12 ದಿನಗಳಿಂದ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದರು.
ಸೋಮವಾರ ಪಂಚವಿಂಶತಿ ಸಂಪ್ರೋಕ್ಷಣಾ ಕಲಶಾಭೀಷೇಕ, ನಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆದವು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಗುರುವಾಯೂರು ಅಪರ್ಣಾ ಶರ್ಮ ಅವರಿಂದ ಭಕ್ತಿಗಾಯನ ನಡೆಯಿತು. ಸಮಾರೋಪದಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಮಾಡಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಕೆ.ಕೆ.ಶೆಟ್ಟಿ, ಬಿ.ಕೆ.ಮಧೂರು, ಗಿರೀಶ್, ಕೆ.ಸುರೇಶ್, ನಾರಾಯಣಯ್ಯ, ಅಪ್ಪಯ್ಯ ನಾಯ್ಕ್, ಸಂತೋಷ್, ಕಾರ್ತಿಕ್, ಸುನಿಲ್, ಪಿ.ರಮೇಶ್, ಮುರಳಿ ಗಟ್ಟಿ ಇತರರು ಇದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿದರು. ರಾಜೇಶ್ ಮಾಸ್ಟರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.