ADVERTISEMENT

ಮಂಗಳೂರು: ಹಾಸ್ಟೆಲಿನಿಂದ ಮೂವರು ಕಾಲೇಜು ವಿದ್ಯಾರ್ಥಿನಿಯರು ನಾಪತ್ತೆ 

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 9:49 IST
Last Updated 21 ಸೆಪ್ಟೆಂಬರ್ 2022, 9:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ನಗರದ ಕಾಲೇಜೊಂದರ ವಿದ್ಯಾರ್ಥಿನಿಲಯದಿಂದ ಮೂವರು ವಿದ್ಯಾರ್ಥಿನಿಯರು ಬುಧವಾರ ನಾಪತ್ತೆಯಾಗಿದ್ದಾರೆ.
ಅವರು ಹಾಸ್ಟೆಲ್‌ನಿಂದಮುಂಜಾನೆ ಬ್ಯಾಗು ಹಿಡಿದುಕೊಂಡು ಒಟ್ಟಿಗೆ ಹೊರಗೆ ಹೋಗಿರುವ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ಈ ಬಗ್ಗೆ ಹಾಸ್ಟೆಲ್‌ನವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿದ್ಯಾರ್ಥಿನಿಯರು ಎಲ್ಲಿಗೆ ಹೋಗಿದ್ದಾರೆ‌ ಎಂದು ತಿಳಿದಿಲ್ಲ. ಅವರ ಮನೆಯವರನ್ನು ಸಂಪರ್ಕಿಸಿ ಹೆಚ್ಚಿನ‌ ಮಾಹಿತಿ ಕಲೆ ಹಾಕುವ ಪ್ರಯತ್ನದಲ್ಲಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.