ಪಿಲಿಕುಳ ಜೈವಿಕ ಉದ್ಯಾನ
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಳೆದ ಕೆಲವು ದಿನಗಳಲ್ಲಿ ಆರು ಪ್ರಾಣಿಗಳು ಮೃತಪಟ್ಟಿವೆ. ಪ್ರಾಣಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿರುವ ಅಧಿಕಾರಿಗಳು, ಕಾರಣ ಪತ್ತೆಗೆ ಮುಂದಾಗಿದ್ದಾರೆ.
ಐದು ದಿನಗಳಲ್ಲಿ ನಾಲ್ಕು ಪ್ರಾಣಿಗಳು ಮೃತಪಟ್ಟಿವೆ. ಮಲಬಾರ್ ಜೈಂಟ್ ಅಳಿಲು, ನಾಲ್ಕು ಪುನಗು ಬೆಕ್ಕು, ಮೂಷಿಕ ಜಿಂಕೆಯ ಮರಿ ಸಾವನ್ನಪ್ಪಿವೆ. ಪ್ರಾಣಿ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಉದ್ಯಾನದಲ್ಲಿ ಪ್ರಾಣಿಗಳು ಮೃತಪಟ್ಟಿರುವುದನ್ನು ಹಂಚಿಕೊಂಡಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ.
‘ಉದ್ಯಾನಕ್ಕೆ ಭೇಟಿ ನೀಡಿದ್ದೆ. ಮಲಬಾರ್ ಜೈಂಟ್ ಅಳಿಲಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 16 ವರ್ಷದ ಅಳಿಲು, ವಯೋಮಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಮೃತಪಟ್ಟಿರಬಹುದು. ಪುನಗು ಬೆಕ್ಕಿನ ಮಾದರಿಗಳನ್ನು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯಾಲಾಜಿಕಲ್ ಮತ್ತು ಬನ್ನೇರುಘಟ್ಟದ ವನ್ಯಜೀವಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರಿ ಆಯುಕ್ತ ಡಾ. ಅರುಣ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.