ADVERTISEMENT

ಬದಿಯಡ್ಕ| ಸರ್ಕಾರಿ ಬಸ್‌ ಡಿಕ್ಕಿ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2023, 14:32 IST
Last Updated 26 ಸೆಪ್ಟೆಂಬರ್ 2023, 14:32 IST

ಬದಿಯಡ್ಕ: ಪೆರ್ಲ ಸಮೀಪದ ಅಡ್ಕಸ್ಥಳದಲ್ಲಿ ಕರ್ನಾಟಕ ಸಾರಿಗೆ ಬಸ್‌ ಡಿಕ್ಕಿಯಾಗಿ ಪಿಕ್‌ಅಪ್‌ ಚಾಲಕ ಮಣಿಯಂಪಾರೆ ನಿವಾಸಿ ಮುಸ್ತಾಫಾ ಫಜ್ಜಾನ (43) ಮೃತ ಪಟ್ಟಿದ್ದಾರೆ.

ಅಡಿಕೆ ಗಿಡಗಳನ್ನು ಹೇರಿಕೊಂಡು ಬರುತ್ತಿದ್ದ ಪಿಕ್‌ಅಪ್‌ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಬಸ್‌ ಡಿಕ್ಕಿಯಾಗಿದೆ. ಎದುರಿನಿಂದ ಬಂದ ಕಾರೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಬಸ್‌ ಪಿಕ್‌ಅಪ್‌ಗೆ ಬಡಿದಿತ್ತು. ಇದರಿಂದ ತಲೆಗೆ ಗಂಭೀರ ಗಾಯಗೊಂಡ ಮುಸ್ತಾಫಾ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪಿಕ್‌ಅಪ್‌ನಲ್ಲಿದ್ದ ಇನ್ನೊರ್ವರಿಗೂ ಗಾಯಗಳಾಗಿವೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT