ಉಳ್ಳಾಲ (ದಕ್ಷಿಣ ಕನ್ನಡ): ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರ್ ಉಚ್ಚಿಲ ಸಮೀಪ ತಾಂತ್ರಿಕ ದೋಷದಿಂದ ಅನಿಲ ಟ್ಯಾಂಕರಿನಿಂದ ಆಸಿಡ್ ಸೋರಿಕೆ ಆರಂಭವಾಗಿದ್ದು, ಸ್ಥಳದಲ್ಲಿ ಉಳ್ಳಾಲ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೀಡುಬಿಟ್ಟಿದ್ದಾರೆ. ಎಂಆರ್ ಪಿಎಲ್ ತಂಡ ಮತ್ತು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಕಾರವಾರದಿಂದ ಕೊಚ್ಚಿಗೆ ಆಸಿಡ್ ಕೊಂಡೊಯ್ಯುವ ಟ್ಯಾಂಕರಿನಲ್ಲಿ ಈ ಸೋರಿಕೆ ಉಂಟಾಗಿದೆ. ಇದನ್ನು ಗಮನಿಸಿದ ಚಾಲಕ ಹೆದ್ದಾರಿ ಬಳಿ ಟ್ಯಾಂಕರನ್ನು ನಿಲ್ಲಿಸಿದ್ದಾರೆ. ತಕ್ಷಣ ಪೊಲೀಸರಿಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಅನಿಲ ಸೋರಿಕೆಯಿಂದ ಶ್ವಾಸಕೋಶದ ತೊಂದರೆಯುಂಟಾಗುವ ಅಪಾಯವಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ, ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.