ADVERTISEMENT

ಬಯಸದೇ ಒದಗಿ ಬಂದರೆ ದೇವರ ಪ್ರಸಾದ: ಆನೆಗುಂದಿ ಸ್ವಾಮೀಜಿ

ಚಾತುರ್ಮಸ್ಯ ಜುಲೈ 13ರಿಂದ * ಆಹ್ವಾನ ನೀಡಿದ ಆನೆಗುಂದಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 14:23 IST
Last Updated 29 ಜೂನ್ 2022, 14:23 IST
ಕಾರ್ಯಕ್ರಮದಲ್ಲಿ ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. (ಎಡದಿಂದ) ಎ.ಲೋಕೇಶ್ ಆಚಾರ್ಯ, ಸುಂದರ ಆಚಾರ್ಯ ಬೆಳುವಾಯಿ, ಕೆ. ಕೇಶವ ಆಚಾರ್ಯ ಇದ್ದಾರೆ
ಕಾರ್ಯಕ್ರಮದಲ್ಲಿ ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. (ಎಡದಿಂದ) ಎ.ಲೋಕೇಶ್ ಆಚಾರ್ಯ, ಸುಂದರ ಆಚಾರ್ಯ ಬೆಳುವಾಯಿ, ಕೆ. ಕೇಶವ ಆಚಾರ್ಯ ಇದ್ದಾರೆ   

ಮಂಗಳೂರು: ‘ಬದುಕಿನಲ್ಲಿ ಬಯಸದೇ ಒದಗಿ ಬಂದ ವಿಚಾರಗಳನ್ನು ದೇವರ ಪ್ರಸಾದ ಎಂಬಂತೆ ಸ್ವೀಕರಿಸಬೇಕು’ ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧ್ಯಕ್ಷ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಚಾತುರ್ಮಾಸ್ಯ ವ್ರತಕ್ಕೆ ಪೂರ್ವಬಾವಿಯಾಗಿ ಕೈಗೊಂಡ ಕ್ಷೇತ್ರ ಸಂದರ್ಶನದ ಅಂಗವಾಗಿ ನಗರದ ರಥಬೀದಿಯ ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ ಅವರು ಆಶೀರ್ವಚನ ನೀಡಿದರು.

‘ಕ್ಷೇತ್ರದಲ್ಲಿ ಇತ್ತೀಚಿಗೆ ಅಮ್ಮನವರಿಗೆ ನಡೆದ ಬ್ರಹ್ಮಕಲಶದ ಪ್ರಭಾವದಿಂದ ಕ್ಷೇತ್ರಕ್ಕೆ ಜಾಗ ಒದಗಿ ಬಂತು. ಪಡುಕುತ್ಯಾರಿನ ಶ್ರೀಮಠವು ಶಾಲೆಯನ್ನು ಹೊಂದುವಂತಾಯಿತು. ಶಾಲೆಯ ಅಭಿವೃದ್ಧಿಗೆ ಸಮಾಜ ಬಾಂಧವರು ತನುಮನದಿಂದ ಸಹಕರಿಸಬೇಕು’ ಎಂದರು.

ADVERTISEMENT

ಸ್ವಾಮೀಜಿ ಅವರ ಈ ವರ್ಷದ ಚಾತುರ್ಮಸ್ಯವು ಜುಲೈ 13 ರಿಂದ ಪಡುಕುತ್ಯಾರಿನಲ್ಲಿ ನಡೆಯಲಿದೆ. ಆಮಂತ್ರಣ ಪತ್ರವನ್ನು ದೇವಸ್ಥಾನದ ಮೊಕ್ತೇಸರರಿಗೆ ಹಸ್ತಾಂತರಿಸಿದಸ್ವಾಮೀಜಿ, ಕಾರ್ಯಕ್ರಮಕ್ಕೆ ಸಮಸ್ತ ಸಮಾಜ ಬಾಂಧವರನ್ನು ಆಹ್ವಾನಿಸಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ, ಮೂರನೇ ಮೊಕ್ತೇಸರ ಎ.ಲೋಕೇಶ್ ಆಚಾರ್ಯ ಬಿಜೈ, ಆಡಳಿತ ಮಂಡಳಿ ಸದಸ್ಯರು ಸ್ವಾಮೀಜಿಗೆ ಫಲವಸ್ತುಗಳನ್ನು ಸಮರ್ಪಿಸಿದರು.

ಶ್ರೀಕಾಳಿಕಾಂಬಾ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿ ಸದಸ್ಯರು ಪೂರ್ಣಕುಂಭದ ಸ್ವಾಗತ ಮಾಡಿದರು ವಿಶ್ವಕರ್ಮ ಯುವ ವೇದಿಕೆ, ವಿಶ್ವಕರ್ಮ ಯುವ ಮಿಲನ, ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಸದಸ್ಯರು ಹಾಗೂ ಕ್ಷೇತ್ರಕ್ಕೆ ಸಂಬಂಧ ಪಟ್ಟ ಎಂಟು ಪೇಟೆಗಳ ಕೂಡುವಳಿಕೆ ಸದಸ್ಯರು ಭಾಗವಹಿಸಿದ್ದರು.

ನಗರದ ಗುರು ಸೇವಾ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಗೊಂಡ ಎಂ. ಶೇಖರ ಆಚಾರ್ಯ ಅವರನ್ನು ಸ್ವಾಮೀಜಿ ಸನ್ಮಾನಿಸಿದರು.ಗುರು ಸೇವಾ ಪರಿಷತ್ತಿನ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಆಚಾರ್ಯ ಅವರು ಚಾತುರ್ಮಾಸ್ಯ ಕಾರ್ಯಕ್ರಮಗಳ ವಿವರ ನೀಡಿದರು. ಸುಜೀರ್ ವಿನೋದ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.