ADVERTISEMENT

ರೋಟರಿ: ₹ 9.40 ಲಕ್ಷ ವೆಚ್ಚದ ಸಾಮಾಜಿಕ ಕೊಡುಗೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 13:31 IST
Last Updated 19 ಜನವರಿ 2025, 13:31 IST
ಬಂಟ್ವಾಳ ತಾಲ್ಲೂಕಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್‌ಗೆ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಭೇಟಿ ನೀಡಿ ವಿವಿಧ ಸಾಮಾಜಿಕ ಚಟುವಟಿಕೆ ಲೋಕಾರ್ಪಣೆಗೊಳಿಸಿದರು
ಬಂಟ್ವಾಳ ತಾಲ್ಲೂಕಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್‌ಗೆ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಭೇಟಿ ನೀಡಿ ವಿವಿಧ ಸಾಮಾಜಿಕ ಚಟುವಟಿಕೆ ಲೋಕಾರ್ಪಣೆಗೊಳಿಸಿದರು   

ಬಂಟ್ವಾಳ: ಇಲ್ಲಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್, ಸಂಗಬೆಟ್ಟು ಗ್ರಾಮದ ಕಲ್ಕುರಿ ಪದವಿನ ಶಾಂತಾ ಬಾಲಕೃಷ್ಣ ನಾಯ್ಕ ದಂಪತಿಗೆ ಸುಸಜ್ಜಿತ ಮನೆ ನಿರ್ಮಿಸಲು ನೆರವು, ವಿವಿಧ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ₹ 9.40 ಲಕ್ಷ ಮೊತ್ತದ ವಿವಿಧ ಕೊಡುಗೆ ಸಲ್ಲಿಸಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಹೇಳಿದರು.

ಕ್ಲಬ್‌ನ ವಿವಿಧ ಸಾಮಾಜಿಕ ಕೊಡುಗೆ ಉದ್ಘಾಟಿಸಿ ಅವರು ಮಾತನಾಡಿದರು. ಕ್ಲಬ್‌ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ಧಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ಅಗ್ರಾರ್ ಆಂಗ್ಲ ಮಾಧ್ಯಮ ಶಾಲೆಗೆ ₹ 60 ಸಾವಿರ ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕ, ಆರಂಬೋಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ರಂಗ ಮಂದಿರ, ಸಿದ್ಧಕಟ್ಟೆ ಸರ್ಕಾರಿ ಪ್ರೌಢಶಾಲೆ ರಂಗಮಂದಿರ ನಿರ್ಮಾಣಕ್ಕೆ ₹ 65 ಸಾವಿರ ನೆರವು, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಯೋಗಾಲಯ ಕೊಠಡಿಗೆ ₹ 25 ಸಾವಿರ, ಟೈಲರಿಂಗ್ ತರಬೇತಿ ಶಿಕ್ಷಕಿಗೆ ₹ 20 ಸಾವಿರ ಗೌರವಧನ, ಹೆಣ್ಣೂರುಪದವು ಅಂಗನವಾಡಿ ಕೇಂದ್ರ ನವೀಕರಣಕ್ಕೆ ₹ 50 ಸಾವಿರ, ಹೆಣ್ಣೂರುಪದವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ₹ 15 ಸಾವಿರ ಮೊತ್ತದ ಕುಡಿಯುವ ನೀರಿನ ಶುದ್ಧೀಕರಣ ಘಟಕ, ಇಬ್ಬರು ಕ್ಯಾನ್ಸರ್ ಪೀಡಿತರಿಗೆ ತಲಾ ₹ 30 ಸಾವಿರ ಮೊತ್ತ ನೀಡಲಾಯಿತು.

ADVERTISEMENT

ಸಹಾಯಕ ಗವರ್ನರ್ ಮುರಳಿಕೃಷ್ಣ ಆರ್.ವಿ, ಮಾಜಿ ಗವರ್ನರ್ ಎನ್.ಪ್ರಕಾಶ ಕಾರಂತ್, ವಲಯ ಸೇನಾನಿ ಗಣೇಶ ಶೆಟ್ಟಿ ಆರಂಬೋಡಿ, ಕ್ಲಬ್‌ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಪಾಲ್ಗೊಂಡಿದ್ದರು. ರಾಜೇಶ ಶೆಟ್ಟಿ ಸೀತಾಳ ವಂದಿಸಿದರು. ರಾಘವೇಂದ್ರ ಭಟ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.