ADVERTISEMENT

ಬಪ್ಪನಾಡು ದೇವಳ: ಅಷ್ಟಮಂಗಳ ಪ್ರಶ್ನೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 3:04 IST
Last Updated 25 ಜುಲೈ 2025, 3:04 IST
ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆ ಸಂಪನ್ನಗೊಂಡಿತು
ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆ ಸಂಪನ್ನಗೊಂಡಿತು   

ಮೂಲ್ಕಿ: ಇಲ್ಲಿನ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಳ ಪ್ರಶ್ನಾ ಚಿಂತನೆ ಪರಿಹಾರಗಳ ಚರ್ಚೆ ವಿಮರ್ಶೆ ಗುರುವಾರ ಸಂಪನ್ನಗೊಂಡಿತು.

ಬಪ್ಪನಾಡು ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದಲಿ ನಡೆದ ಅವಘಡದ ನಂತರ ಮೇ 21ರಂದು ಮೂರು ಹಂತವಾಗಿ ಆರಂಭಗೊಂಡಿದ್ದ ಅಷ್ಟಮಂಗಳ ಪ್ರಶ್ನೆಯ ವಿಮರ್ಶೆ ಮತ್ತು ಪರಿಹಾರಗಳ ಚರ್ಚೆಗೆ ಮಂಗಳ ಹಾಡಲಾಯಿತು.

ಕಾಸರಗೋಡು ಒಳಗುಂಜೆ ವೆಂಕಟರಮಣ ಭಟ್, ಮುರಳಿ ಕೃಷ್ಣ ಶರ್ಮ, ವಿಮರ್ಶಕ ಸದಾನಂ ನಾರಾಯಣ ಪುದುವಾಳ್ ಅವರ ಮಾರ್ಗದರ್ಶನದಲ್ಲಿ ನಡೆಯಿತು.

ADVERTISEMENT

ಪ್ರಶ್ನೆಯಲ್ಲಿ ದೇವಸ್ಥಾನದ ಕ್ಷೇತ್ರ ಪಾಲನ ಅಭಿವೃದ್ಧಿ, ಧ್ವಜಸ್ತಂಭ, ನೂತನ ರಥದ ನಿರ್ಮಾಣ, ಸೂಕ್ತ ಮಾರ್ಗದರ್ಶನ, ದೇವಳದ ಅಭಿವೃದ್ಧಿಯ ಅಡೆತಡೆಗಳ ನಿರ್ವಹಣೆ, ದೇವಳದ ಆಗು-ಹೋಗುಗಳ ಪರಾಮರ್ಶೆ, ಇತರ ವಿಷಯದ ಬಗ್ಗೆ ಬಗ್ಗೆ ಚರ್ಚೆಯಾಗಿ ದೇವಳದ ಸಂಪೂರ್ಣ ಅಭಿವೃದ್ಧಿಗೆ ಒಮ್ಮತದ ತೀರ್ಮಾನ ನಡೆಯಬೇಕು ಎಂದು ನಿರ್ಣಯಿಸಲಾಯಿತು.

ಈ ಸಂದರ್ಭ ಜ್ಯೋತಿಷ್ಯರಾದ ವಾಸುದೇವ ಭಟ್ ಪಾವಂಜೆ, ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ, ಶಾಸಕ ಉಮಾನಾಥ್ ಕೋಟ್ಯಾನ್, ತಂತ್ರಿ ಶಿಬರೂರು ಗೋಪಾಲಕೃಷ್ಣ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಕಾರ್ಯ ನಿರ್ವಾಹಣಾಧಿಕಾರಿ ಶ್ವೇತಾ ಪಳ್ಳಿ, ಹರಿಕೃಷ್ಣ ಪುನರೂರು, ಅಪ್ಪು ಪೂಜಾರಿ ಸಸಿಹಿತ್ಲು, ಸುನಿಲ್ ಆಳ್ವ, ಶರತ್ ಸಾಲ್ಯಾನ್, ರಾಮಚಂದ್ರ ನಾಯಕ್ ಕೊಳ್ನಾಡುಗುತ್ತು, ಸುಜಿತ್ ಸಾಲಿಯನ್, ಚಂದ್ರಶೇಖರ ನ್ಯಾಯವಾದಿ, ಕಿರಣ್ ಶೆಟ್ಟಿ ಕೋಲ್ನಾಡುಗುತ್ತು, ಅಶೋಕ್ ಕುಮಾರ್ ಶೆಟ್ಟಿ, ವಾಮನ ಕೋಟ್ಯಾನ್ ನಡಿಕುದ್ರು, ಸಂಜೀವ ದೇವಾಡಿಗ, ನಾಗೇಶ್ ಬಪ್ಪನಾಡು, ಶಿವಶಂಕರ್ ವರ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.