ADVERTISEMENT

ಬೆಳ್ತಂಗಡಿ: ಡಿ.31ಕ್ಕೆ ಬೃಹತ್ ಜಾಥಾ, ಸಮಾವೇಶ

ಗುರುವಾಯನ ಕೆರೆಯಲ್ಲಿ ಸಿದ್ಧತಾ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 5:22 IST
Last Updated 28 ನವೆಂಬರ್ 2021, 5:22 IST
ಬೆಳ್ತಂಗಡಿ ಸಮೀಪದ ಗುರುವಾಯನಕೆರೆಯಲ್ಲಿ ನಡೆದ ದಲಿತರ ಮತ್ತು ಭೂರಹಿತರ ಹಕ್ಕೊತ್ತಾಯ ಬೃಹತ್ ಜಾಥಾ ಮತ್ತು ಸಮಾವೇಶ ಪೂರ್ವ ಸಿದ್ಧತಾ ಸಭೆಯಲ್ಲಿ ಜಯಪ್ರಕಾಶ್ ಭಟ್ ಸಿ.ಎಚ್., ಕೆ.ನೇಮಿರಾಜ್, ಬಾಬಿ ಮಾಲಾಡಿ, ಸೋಮನಾಥ ನಾಯಕ್ ಇದ್ದರು.
ಬೆಳ್ತಂಗಡಿ ಸಮೀಪದ ಗುರುವಾಯನಕೆರೆಯಲ್ಲಿ ನಡೆದ ದಲಿತರ ಮತ್ತು ಭೂರಹಿತರ ಹಕ್ಕೊತ್ತಾಯ ಬೃಹತ್ ಜಾಥಾ ಮತ್ತು ಸಮಾವೇಶ ಪೂರ್ವ ಸಿದ್ಧತಾ ಸಭೆಯಲ್ಲಿ ಜಯಪ್ರಕಾಶ್ ಭಟ್ ಸಿ.ಎಚ್., ಕೆ.ನೇಮಿರಾಜ್, ಬಾಬಿ ಮಾಲಾಡಿ, ಸೋಮನಾಥ ನಾಯಕ್ ಇದ್ದರು.   

ಬೆಳ್ತಂಗಡಿ: ತಾಲ್ಲೂಕು ಮಟ್ಟದ ದಲಿತರ ಮತ್ತು ಭೂರಹಿತರ ಹಕ್ಕೊತ್ತಾಯ ಬೃಹತ್ ಜಾಥಾ ಮತ್ತು ಸಮಾವೇಶ ಡಿ.31ಕ್ಕೆ ನಡೆಯಲಿದ್ದು ಈ ಕುರಿತು ಸಿದ್ಧತಾ ಸಭೆ ಸಮಿತಿಯ ಸಂಚಾಲಕ ಎಂ.ಬಿ.ಕರಿಯ ಧರ್ಮಸ್ಥಳ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲ್ಲೂಕಿನಲ್ಲಿರುವ ಟ್ರಸ್ಟ್‌ನ 54 ಸಂಪರ್ಕ ಕೇಂದ್ರಗಳ ಭೇಟಿ ಮತ್ತು ಜಾಗೃತಿಯ ರೂಪರೇಷೆಯನ್ನು ಟ್ರಸ್ಟಿಗಳ ಜವಾಬ್ದಾರಿಯಲ್ಲಿ ಮಾಡುವುದಾಗಿ ನಾಗರಿಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಭಟ್‌ ತಿಳಿಸಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಸಂಚಾಲಕ ಕೆ.ನೇಮಿರಾಜ್ ಮತ್ತು ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ಸಂಚಾಲಕ ಬಾಬಿ ಮಾಲಾಡಿ ಮಾತನಾಡಿದರು.

ADVERTISEMENT

3 ತಂಡ ರಚಿಸಿ ತಾಲ್ಲೂಕಿನ ಪರಿಶಿಷ್ಟ ಕಾಲೊನಿಗಳನ್ನು, ಪರಿಶಿಷ್ಟರ ಮನೆಗಳನ್ನು ಸಂಪರ್ಕಿಸಿ ನಿವಾಸಿಗಳ ಸ್ಥಿತಿಗತಿ ಅರಿವು, ಭೂಹಕ್ಕೊತ್ತಾಯಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಪರಿಶಿಷ್ಟರ ಮುಖಂಡ ಎಂ.ಬಿ.ಕರಿಯ ಹೇಳಿದರು.

ದಲಿತ ಅಭಿವೃದ್ಧಿ ಸಮಿತಿ ಸಂಚಾಲಕ ಕೆ.ಸೋಮ, ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಅಶೋಕ ದೇವಾಡಿಗ, ಕುಸುಮಾವತಿ, ವೆಂಕಪ್ಪ ಉಜಿರೆ, ಬಾಬು ಗೌಡ ಪಾಂಗಾಳ, ಶೀನ ಪಿಲ್ಯ, ಐ.ಕುಶಾಲಪ್ಪ ಗೌಡ, ವಿದ್ಯಾ ನಾಯಕ್, ಸಿ.ಕೆ.ಚಂದ್ರಕಲಾ, ಬಾಬು ಎ., ಹಿಂದು ಹಿತಚಿಂತನ ವೇದಿಕೆಯ ಸಂಚಾಲಕ ಸೋಮಶೇಖರ ದೇವಸ್ಯ, ಸಂಚಾಲಕ ಚಂದ್ರಹಾಸ ದಾಸ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.