ಮಂಗಳೂರು: ಹಕ್ಕಿ ಜ್ವರದ ಆತಂಕ ಮನೆಮಾಡಿರುವ ಸಂದರ್ಭದಲ್ಲಿ ನಗರದ ಹೊರವಲಯದ ವಾಮಂಜೂರಿನ ಪಚ್ಚನಾಡಿ ಸಮೀಪ ಮೂರು ಕಾಗೆಗಳು ಸತ್ತು ಬಿದ್ದಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಪಚ್ಚನಾಡಿ ಡಂಪಿಂಗ್ ಯಾರ್ಡ್ ಸಮೀಪ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಮೂರು ಕಾಗೆಗಳು ಸತ್ತು ಬಿದ್ದಿರುವುದು ಸೋಮವಾರ ಬೆಳಿಗ್ಗೆ ಕಂಡುಬಂದಿದೆ.
ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಕಾಗೆಗಳ ದೇಹದ ಮಾದರಿಯನ್ನು ಸಂಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.