ADVERTISEMENT

ದ್ವೇಷ ಭಾವನೆ ಕೆರಳಿಸಲು ವಿವಾದ: ಡಾ. ಇಲ್ಯಾಸ್

​ಪ್ರಜಾವಾಣಿ ವಾರ್ತೆ
Published 27 ಮೇ 2022, 5:45 IST
Last Updated 27 ಮೇ 2022, 5:45 IST

ಮಂಗಳೂರು: ‘ಬಾಬರಿ ಮಸೀದಿ ವಿವಾದದ ನಂತರ ಜನರಲ್ಲಿ ದ್ವೇಷ ಭಾವನೆ ಕೆರಳಿಸಲು ಸಂಘ ಪರಿವಾರವು ಜ್ಞಾನವಾಪಿ, ತಾಜ್‌ಮಹಲ್, ಹಿಜಾಬ್ ಇತ್ಯಾದಿ ವಿಚಾರಗಳನ್ನು ಕೈಗೆತ್ತಿಕೊಂಡಿದೆ’ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಡಾ. ಎಸ್.ಕ್ಯು.ಆರ್. ಇಲ್ಯಾಸ್ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಇದೇ ರೀತಿ ಕೋಮು ದ್ವೇಷವನ್ನು ಮುಂದುವರಿಸಿದರೆ ಶ್ರೀಲಂಕಾದ ಪರಿಸ್ಥಿತಿ ಭಾರತಕ್ಕೂ ಬರುವ ಆತಂಕವಿದೆ. ಬುರ್ಖಾ ಹೊಸ ವಿಚಾರವೇ ಅಲ್ಲ. ಮುಸ್ಲಿಮರು ಮಾತ್ರವಲ್ಲದೆ, ಹಿಂದೂಗಳಲ್ಲೂ ತಲೆವಸ್ತ್ರ ಹಾಕುತ್ತಾರೆ. ಇಷ್ಟು ಸಮಯ ಯಾರಿಗೂ ತೊಂದರೆಯಾಗದ ವಿಚಾರ ಈಗ ಸಮಸ್ಯೆಯಾಗಿ ಕಾಣಲು ಕಾರಣವೇನು’ ಎಂದು ಪ್ರಶ್ನಿಸಿದರು.

ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ, ಬಿಜೆಪಿ ಕಿತ್ತೊಗೆಯಲು ಜಾತ್ಯತೀತ ಪಕ್ಷಗಳು ಒಗ್ಗಟ್ಟಾಗಬೇಕಾದ ಅಗತ್ಯವಿದೆ ಎಂದರು.

ADVERTISEMENT

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣಿ ಅರ್ಮಗಂ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಾಹಿರ್ ಹುಸೈನ್, ಉಪಾಧ್ಯಕ್ಷ ಶ್ರೀಕಾಂತ ಸಾಲ್ಯಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ಜಿಲ್ಲಾ ಘಟಕದ ಅಧ್ಯಕ್ಷ ಸರ್ಪಾಝ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.