ADVERTISEMENT

ಉಳ್ಳಾಲ: ಆರ್‌ಎಸ್‌ಎಸ್ ಕಾರ್ಯಕರ್ತನ ಕುಟುಂಬಕ್ಕೆ ಬಿಜೆಪಿ ನೆರವು

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:07 IST
Last Updated 19 ಜನವರಿ 2026, 4:07 IST
ಮಾಧವ ಆಚಾರ್ಯ ಅವರ ಕುಟುಂಬಸ್ಥರಿಗೆ ಚೆಕ್‌ ವಿತರಿಸಲಾಯಿತು
ಮಾಧವ ಆಚಾರ್ಯ ಅವರ ಕುಟುಂಬಸ್ಥರಿಗೆ ಚೆಕ್‌ ವಿತರಿಸಲಾಯಿತು   

ಉಳ್ಳಾಲ: 20 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಬೈಠಕ್ ಮುಗಿಸಿ ವಾಪಸಾಗುತ್ತಿದ್ದಾಗ ಅಸೌಖ್ಯಕ್ಕೀಡಾಗಿ ಮೃತಪಟ್ಟ ಜನಸಂಘ, ಬಿಜೆಪಿ, ಆರ್‌ಎಸ್‌ಎಸ್‌ ಸದಸ್ಯರಾಗಿದ್ದ ಕುತ್ತಾರುಗುತ್ತು ಸಮೀಪದ ನಿವಾಸಿ ಮಾಧವ ಆಚಾರ್ಯ ಕುಟುಂಬಕ್ಕೆ ಬಿಜೆಪಿ ಮುಖಂಡ ಜಯರಾಮ ಶೆಟ್ಟಿ ಸೇರಿದಂತೆ ಮುಖಂಡರು ₹ 2 ಲಕ್ಷ ಸಹಾಯಹಸ್ತವಾಗಿ ವಿತರಿಸಿದರು.

ಜಯರಾಮ ಶೆಟ್ಟಿ ಮಾತನಾಡಿ, ಕುತ್ತಾರು ಪರಿಸರದ ಬಿಜೆಪಿಯ ಮುಖಂಡರು, ಕುತ್ತಾರು ಗುತ್ತಿನವರು ಸೇರಿ ನೆರವು ನೀಡಲಾಗಿದೆ ಎಂದರು.

ಸಂಘದ ಮುಖಂಡ ಪ್ರಭಾಕರ್ ಶೆಟ್ಟಿ ಮಾತನಾಡಿ, ದಾನಿಗಳು ಕುಟುಂಬಕ್ಕೆ ನೆರವಾಗಬೇಕು ಎಂದು ಕೋರಿದರು.

ADVERTISEMENT

ವಿಶ್ವ ಹಿಂದೂ ಪರಿಷತ್‌ ಮುಖಂಡ ಪ್ರವೀಣ್ ರಾಜ್ ಕುತ್ತಾರ್, ಪ್ರಮುಖರಾದ ಬಾಬು ಶೆಟ್ಟಿ, ಕೆ.ಗಂಗಾಧರ ಆಳ್ವ ಕುತ್ತಾರಗುತ್ತು, ಸಂದೀಪ್ ಶೆಟ್ಟಿ ಕುತ್ತಾರಗುತ್ತು, ಸಂದೀಪ್ ಶೆಟ್ಟಿ, ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ ಕುತ್ತಾರಗುತ್ತು, ಕೆ.ಶಶಿಕಾಂತ್ ಆಚಾರ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.