ADVERTISEMENT

‘ರೆಡ್ ಡ್ರಾಪ್’ ಅಭಿಯಾನ: ರಕ್ತದ ಕೊರತೆ ನೀಗಿಸಲು ಐಸಿವೈಎಂ ಯೋಜನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 3:28 IST
Last Updated 13 ಜೂನ್ 2021, 3:28 IST
ರೆಡ್‌ ಡ್ರಾಪ್‌ ಆ್ಯಪ್‌
ರೆಡ್‌ ಡ್ರಾಪ್‌ ಆ್ಯಪ್‌   

ಮಂಗಳೂರು: ಸಂಕಷ್ಟ ಕಾಲದಲ್ಲಿ ರಕ್ತದ ಕೊರತೆ ಹಾಗೂ ರಕ್ತದಾನಿಗಳ ಕೊರತೆ ಹಲವು ಆಸ್ಪತ್ರೆಗಳಲ್ಲಿ ಸವಾಲಾಗಿ ಪರಿಣಮಿಸಿತ್ತು. ಐಸಿವೈಎಂ ನಡೆಸುತ್ತಿರುವ ‘ರೆಡ್ ಡ್ರಾಪ್‌’ ಅಭಿಯಾನದಿಂದ ಕಷ್ಟಕರ ಅವಧಿಯಲ್ಲಿ ರಕ್ತದ ಅಗತ್ಯವಿರುವ ವಿವಿಧ ಜನರಿಗೆ ರಕ್ತದಾನಿಗಳನ್ನು ಒದಗಿಸಲು ಸಾಧ್ಯವಾಗಿದೆ.

‘ರೆಡ್ ಡ್ರಾಪ್ ಮಂಗಳೂರು’ ಮೊಬೈಲ್ ಆ್ಯಪ್‌ ಮೂಲಕ ನಿರ್ವಹಿಸುವ ಈ ವಿಭಿನ್ನ ಯೋಜನೆಯು, ರಕ್ತದ ಅಗತ್ಯವಿರುವ ವಿವಿಧ ಫಲಾನುಭವಿಗಳನ್ನು ಗುರುತಿಸಿ, ಅಗತ್ಯವಿರುವ ವಿವಿಧ ದಾನಿಗಳನ್ನು ತಲುಪಿಸುತ್ತದೆ. ಈ ಅಭಿಯಾನವು 5 ವರ್ಷಗಳಿಂದ ನಡೆಯುತ್ತಿದ್ದು, ಲಾಕ್‍ಡೌನ್ ಅವಧಿಯಲ್ಲಿ ರೆಡ್ ಡ್ರಾಪ್ ಮಂಗಳೂರು ಆ್ಯಪ್‌ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಬಳಕೆ ಆಗುತ್ತಿದೆ.

ರೆಡ್ ಡ್ರಾಪ್‌ ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ಯೋಜನೆಯಾಗಿದ್ದು, ನಿರ್ದೇಶಕ ರೆ.ಫಾ. ಅಶ್ವಿನ್ ಕಾರ್ಡೋಜಾ, ಅಧ್ಯಕ್ಷ ಲಿಯೋನ್ ಸಲ್ಡಾನ, ಕಾರ್ಯದರ್ಶಿ ವೀಣಾ ವಾಸ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಮಿನೋಲ್ ಬ್ರ್ಯಾಗ್ಸ್ ಹಾಗೂ ಈ ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರವೀಣ್ ಕ್ರಾಸ್ತಾ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.