ಮಂಗಳೂರು: ನಗರದ ತಣ್ಣೀರುಬಾವಿಯಲ್ಲಿ ದೋಣಿ ನಿರ್ಮಿಸುವ ಕಾರ್ಮಿಕನನ್ನು ಸಹಕಾರ್ಮಿಕನೇ ಇರಿದು ಶನಿವಾರ ಕೊಲೆ ಮಾಡಿದ್ದು, ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದ ತಳಿಪರಂಬದ ಜಾನ್ಸನ್ ಅಲಿಯಾಸ್ ಬಿನೋಯ್ (52) ಕೊಲೆಗೀಡಾದ ಕಾರ್ಮಿಕ. ಆತನ ಜೊತೆ ದೋಣಿ ನಿರ್ಮಾಣ ಮತ್ತು ರಿಪೇರಿ ಕೆಲಸಕ್ಕೆ ಬಂದಿದ್ದ ಕೇರಳ ಕೊಲ್ಲಂನ ಬಿನು (41) ಕೊಲೆ ಆರೋಪಿ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ದೋಣಿ ಕಟ್ಟುವ ಹಾಗೂ ರಿಪೇರಿ ಮಾಡುವ ಕೆಲಸಕ್ಕಾಗಿ ಬಂದಿದ್ದ ಅವರು, ತಣ್ಣೀರುಬಾವಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕೆಲಸದ ಸ್ಥಳದಲ್ಲಿ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ವಾಸವಿದ್ದರು. ಶನಿವಾರ ಸಂಜೆ ಅವರ ನಡುವೆ ಜಗಳ ನಡೆದಿತ್ತು ಬಿನೋಯ್ ತನ್ನ ಕೊಠಡಿಯಲ್ಲಿ ಮಲಗಿದ್ದಾಗ ಪಾನಮತ್ತನಾಗಿದ್ದ ಬಿನು ಆತನಿಗೆ ಮಾರಕಾಯುಧದಿಂದ ಇರಿದಿದ್ದ. ಬಿನೋಯ್ ದೇಹದಲ್ಲಿ ಒಂದು ಇರಿತದ ಗಾಯವಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.