ಅಳದಂಗಡಿ: ಸತ್ಯದೇವತಾ ದೈವಸ್ಥಾನದ ವತಿಯಿಂದ ವರ್ಷಂಪ್ರತಿ ಉಚಿತವಾಗಿ ನೀಡುವ ಪುಸ್ತಕ ವಿತರಣಾ ಸಮಾರಂಭ ಮತ್ತು ಶಿವಪ್ರಸಾದ್ ಅಜಿಲ ಅವರ ಪೌರ ಸನ್ಮಾನ ಕಾರ್ಯಕ್ರಮದ ಪೂರ್ವಭಾವಿ ಸಭೆ ಅಳದಂಗಡಿ ಸೋಮನಾಥೇಶ್ವರೀ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ವಹಿಸಿದ್ದರು.
ಪೌರ ಸನ್ಮಾನ ಸಮಿತಿ ಅಧ್ಯಕ್ಷ ಎಂ.ಗಂಗಾಧರ ಮಿತ್ತಮಾರು, ಶಿವಪ್ರಸಾದ್ ಅಜಿಲ, ಪ್ರಮುಖರಾದ ಸೋಮನಾಥ ಮಯ್ಯ, ಭರತೇಶ್ ವಿ., ಡಾ.ಎನ್.ಎಂ.ತುಳುಪುಳೆ, ಯೋಗೀಶ್ ಕುಮಾರ್ ನಡಕ್ಕರ, ರಾಜಶೇಖರ ಶೆಟ್ಟಿ, ಅಜಿತ್ ಕುಮಾರ್ ನಾವರ, ಸದಾನಂದ ಪೂಜಾರಿ ಉಂಗಿಲಬೈಲ್, ಸುಪ್ರೀತ್ ಜೈನ್, ರತ್ನರಾಜ ಜೈನ್ ಪಿಲ್ಯ, ಮೋಹನ್ ಎ.ದಾಸ್ ಅಳದಂಗಡಿ, ಕೃಷ್ಣಪ್ಪ ಪೂಜಾರಿ, ಸಂತೋಷ್ ಹೆಗ್ಡೆ ಕಟ್ಟೆ, ನಾಗಭೂಷಣ್, ಮಂಗಳಾ, ಬಡಗಕಾರಂದೂರು ಶಾಲೆ ಮುಖ್ಯಶಿಕ್ಷಕ ಸುರೇಶ್, ಹರಿಣಾಕ್ಷಿ ಕೆ.ಶೆಟ್ಟಿ, ಶ್ರೀರಂಗಮಯ್ಯ, ಜಗನ್ನಾಥ ಶೆಟ್ಟಿ, ಗಣೇಶ್ ದೇವಾಡಿಗ, ಧರ್ಣಪ್ಪ ದೋರಿಂಜೆ, ಯಶೋಧರ ಬಿಕ್ಕಿರ, ಸದಾನಂದ ಬಿ.ಕುದ್ಯಾಡಿ, ಕೊರಗಪ್ಪ ಕುಡ್ದಲಬೆಟ್ಟು, ಜಗದೀಶ್ ರೈ, ಹರೀಶ್ ಕುಲಾಲ್ ಕೆದ್ದು, ಸಂತೋಷ್ ಕಟ್ಟೆ ಭಾಗವಹಿಸಿದ್ದರು.
ಸಮಾರಂಭವನ್ನು ಜೂನ್ 14ರಂದು ಹಮ್ಮಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು
ಪೌರ ಸನ್ಮಾನ ಸಮಿತಿ ಕಾರ್ಯದರ್ಶಿ ಪಿ.ಎಚ್.ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.