ADVERTISEMENT

ಬದುಕಿನ ಸತ್ಯಗಳು, ಸ್ವಾತಿಮುತ್ತು ಕೃತಿಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಮೇ 2024, 6:10 IST
Last Updated 27 ಮೇ 2024, 6:10 IST
ಲೇಖಕಿ ನಳಿನಾಕ್ಷಿ ಉದಯರಾಜ್  ಅವರ ‘ಬದುಕಿನ ಸತ್ಯಗಳು’ ಕೃತಿಯನ್ನು ಲೇಖಕಿ ಬಿ.ಎಂ ರೋಹಿಣಿ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನವನ್ನು ಲೇಖಕ ಸದಾನಂದ ನಾರಾವಿ ಅವರು ಕಾರ್ಯಕ್ರಮದಲ್ಲಿ ಶನಿವಾರ ಬಿಡುಗಡೆ ಮಾಡಿದರು. ಮುದ್ದು ಮೂಡುಬೆಳ್ಳೆ, ಜ್ಯೋತಿ ಚೇಳ್ಯಾರು ಮತ್ತಿತರರು ಭಾಗವಹಿಸಿದ್ದರು 
ಲೇಖಕಿ ನಳಿನಾಕ್ಷಿ ಉದಯರಾಜ್  ಅವರ ‘ಬದುಕಿನ ಸತ್ಯಗಳು’ ಕೃತಿಯನ್ನು ಲೇಖಕಿ ಬಿ.ಎಂ ರೋಹಿಣಿ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನವನ್ನು ಲೇಖಕ ಸದಾನಂದ ನಾರಾವಿ ಅವರು ಕಾರ್ಯಕ್ರಮದಲ್ಲಿ ಶನಿವಾರ ಬಿಡುಗಡೆ ಮಾಡಿದರು. ಮುದ್ದು ಮೂಡುಬೆಳ್ಳೆ, ಜ್ಯೋತಿ ಚೇಳ್ಯಾರು ಮತ್ತಿತರರು ಭಾಗವಹಿಸಿದ್ದರು    

ಮಂಗಳೂರು: ಲೇಖಕಿ ನಳಿನಾಕ್ಷಿ ಉದಯರಾಜ್ ರಚಿಸಿರುವ ‘ಬದುಕಿನ ಸತ್ಯಗಳು’ ಸಮಕಾಲೀನ ಚಿಂತನೆಗಳ ಸಂಕಲನವನ್ನು ಲೇಖಕಿ ಬಿ.ಎಂ.ರೋಹಿಣಿ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನವನ್ನು ಲೇಖಕ ಸದಾನಂದ ನಾರಾವಿ ಇಲ್ಲಿ ಶನಿವಾರ ಬಿಡುಗಡೆ ಮಾಡಿದರು.


ಕರಾವಳಿ ಲೇಖಕಿಯರ - ವಾಚಕಿಯರ ಸಂಘ ಹಾಗೂ ಬೆಂಗಳೂರಿನ ವಸಂತಪುರದ ಸುಶಾಂತ ಪ್ರಕಾಶನದ ಆಶ್ರಯದಲ್ಲಿ ಏರ್ಪಡಿಸಿದ್ದ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿದ ಲೇಖಕ ಮುದ್ದು ಮೂಡುಬೆಳ್ಳೆ, ‘ಈ ಎರಡೂ ಕೃತಿಗಳು ಬದುಕಿನ ಸತ್ಯಗಳೊಂದಿಗೆ ಸಾರ್ವಕಾಲಿಕ ಸತ್ಯಗಳನ್ನು ಅನಾವರಣಗೊಳಿಸಿವೆ. ಜೀವನಾನುಭವದ ಸಂದೇಶಗಳನ್ನೊಳಗೊಂಡ ಅಂಕಣ ಬರಹಗಳನ್ನು ಕೃತಿ ರೂಪಕ್ಕಿಳಿಸಿದರೆ ಹೆಚ್ಚು ಜನರನ್ನು ತಲುಪಬಹುದು’ ಎಂದರು.


ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳ್ಯಾರು ಅಧ್ಯಕ್ಷತೆ ವಹಿಸಿದ್ದರು.
ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಸುಧಾರಾಣಿ ಮತ್ತು ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕೃತಿ  ಪರಿಚಯ ಮಾಡಿದರು.   ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಸುಕುಮಾರ್ ಕುಂಬಳೆ , ಸುಶಾಂತ ಪ್ರಕಾಶನದ ಸುಶಾಂತ್ ರಾಜ್ ಭಾಗವಹಿಸಿದ್ದರು.

ADVERTISEMENT

ಕೃತಿಗಳ ಲೇಖಕಿ ನಳಿನಾಕ್ಷಿ ಉದಯರಾಜ್ ಸ್ವಾಗತಿಸಿದರು. ಶಿಕ್ಷಕಿ ರತ್ನಾವತಿ ಜೆ. ಬೈಕಾಡಿ ಆಶಯ ಗೀತೆ ಹಾಡಿದರು. ವಿಜಯಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಅನಿಕೇತ್ ಧನ್ಯವಾದ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.