ADVERTISEMENT

8ರಂದು ಗಡಿನಾಡ ಜಾನಪದ ಉತ್ಸವ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 13:34 IST
Last Updated 5 ಸೆಪ್ಟೆಂಬರ್ 2018, 13:34 IST

ಬದಿಯಡ್ಕ: ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಇದೇ 8ರಂದು ಬೆಳಗ್ಗೆ 9ರಿಂದ ಬದಿಯಡ್ಕ ಗುರುಸದನದಲ್ಲಿ ಗಡಿನಾಡ ಜಾನಪದ ಉತ್ಸವ ನಡೆಯಲಿದೆ. ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು.

ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ಸಾರ್ವಜನಿಕ ಸನ್ಮಾನ ನಡೆಯಲಿದೆ. ಅರಣ್ಯ ಖಾತೆ ಸಚಿವ ಆರ್ ಶಂಕರ್, ಕಾಸರಗೋಡು ಸಂಸದ ಪಿ ಕರುಣಾಕರನ್, ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಕೆ ಹರೀಶ್ ಕುಮಾರ್ ಭಾಗವಹಿಸುವರು. ಹಿರಿಯ ಜಾನಪದ ಲೇಖಕ ಹಾಗೂ ಸಂಶೋಧಕ ಕೇಳು ಮಾಸ್ತರ್ ಅಗಲ್ಪಾಡಿ ಅವರನ್ನು ಗೌರವಿಸಲಾಗುವುದು.

ಜಾನಪದ ಸಂಸ್ಕೃತಿ ಮೆರವಣಿಗೆಯ ಉದ್ಘಾಟನೆಯನ್ನು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎನ್ ಕೃಷ್ಣ ಭಟ್ ನಿರ್ವಹಿಸುವರು. ಕೇರಳ ಕರ್ನಾಟಕ ಪ್ರಸಿದ್ಧ ಜಾನಪದ ತಂಡಗಳಿಂದ ನೃತ್ಯ ವೈಭವ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.