ADVERTISEMENT

ಪುತ್ತೂರು: ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ವಿತರಣೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 6:04 IST
Last Updated 12 ಡಿಸೆಂಬರ್ 2021, 6:04 IST
ಪುತ್ತೂರು ತಾಲ್ಲೂಕಿನ ಸರ್ವೆ ಗ್ರಾಮದ ಸುಬ್ರಹ್ಮಣ್ಯೇಶ್ವರ ದೇವಳದ ಪುನರ್ ನಿರ್ನಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆಯನ್ನು ಪುತ್ತೂರು ನಗರದಲ್ಲಿ ವಿತರಿಸುವ ಕಾರ್ಯಕ್ರಮ ಶನಿವಾರ ನಡೆಯಿತು.
ಪುತ್ತೂರು ತಾಲ್ಲೂಕಿನ ಸರ್ವೆ ಗ್ರಾಮದ ಸುಬ್ರಹ್ಮಣ್ಯೇಶ್ವರ ದೇವಳದ ಪುನರ್ ನಿರ್ನಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆಯನ್ನು ಪುತ್ತೂರು ನಗರದಲ್ಲಿ ವಿತರಿಸುವ ಕಾರ್ಯಕ್ರಮ ಶನಿವಾರ ನಡೆಯಿತು.   

ಪುತ್ತೂರು: ತಾಲ್ಲೂಕಿನ ಸರ್ವೆ ಗ್ರಾಮದ ಸುಬ್ರಹ್ಮಣ್ಯೇಶ್ವರ ದೇವಳದ ಪುನರ್ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಡಿ.21ರಿಂದ 28ರವರೆಗೆ ನಡೆಯಲಿದೆ. ಇದರ ಅಂಗವಾಗಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ನಗರದಲ್ಲಿ ವಿತರಿಸುವ ಕಾರ್ಯಕ್ರಮ ಶನಿವಾರ ನಡೆಯಿತು.

ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವಿ.ಎಸ್.ಭಟ್ ಅವರು ದೇವಳದ ಗರ್ಭಗುಡಿಯಲ್ಲಿ ಆಮಂತ್ರಣ ಪತ್ರಿಕೆ, ಫಲಪುಷ್ಪಗಳನ್ನಿಟ್ಟು, ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಿಸಿದರು. ನಂತರ ಆಮಂತ್ರಣ ಪತ್ರಿಕೆಯನ್ನು ನಗರದಾದ್ಯಂತ ವಿತರಿಸಲಾಯಿತು.

ಸುಬ್ರಹ್ಮಣ್ಯೇಶ್ವರ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಮಾತನಾಡಿ, ‘ಈಗಾಗಲೇ ದೇವಳದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು, ಬ್ರಹ್ಮಕಲಶೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು’ ಎಂದು ವಿನಂತಿಸಿದರು.

ADVERTISEMENT

ದೇವಳದ ಜೀರ್ಣೊದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಭಂಡಾರಿ ಸೊರಕೆ, ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ ಸರ್ವೆ, ಖಜಾಂಚಿ ಪ್ರಸಾದ್ ರೈ ಸೊರಕೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಪ್ರಧಾನ ಅರ್ಚಕ ಶ್ರೀರಾಮ ಕಲ್ಲೂರಾಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್ ರೈ ಓಲೆಮುಂಡೋವು, ಕಾರ್ಯಾಧ್ಯಕ್ಷ ವಿಜಯ ಕುಮಾರ್ ರೈ, ವಿವಿಧ ಸಮಿತಿಗಳ ಪ್ರಮುಖರಾದ ಶಿವರಾಮ ಭಟ್, ತುಳಸಿ, ಲಿಂಗಪ್ಪ ಗೌಡ ಕರುಂಬಾರು, ವಿನಯ್ ಕುಮಾರ್ ರೈ, ಚಂದ್ರಶೇಖರ ಎಸ್.ಎಸ್.ಡಿ., ಲೋಕೇಶ್ ಗೌಡ ತಂಬುತ್ತಡ್ಕ, ಶಶಿಧರ ಎಸ್.ಡಿ. ಸರ್ವೆ ದೋಳಗುತ್ತು, ಪುರಂದರ ರೈ ಬೊಟ್ಯಾಡಿ, ವಸಂತ ರೈ ಸೊರಕೆ, ಅಶೋಕ ನಾಯ್ಕ ಸೊರಕೆ, ರಸಿಕ ರೈ ಮೇಗಿನಗುತ್ತು, ಪ್ರಸಾದ್ ರೈ ಸೊರಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.