
ಬಂಟ್ವಾಳ: ಮಕ್ಕಳಿಗೆ ಚೆಸ್ ಬಗ್ಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದಾಗ ಅವರ ಮನಸ್ಸು ಚುರುಕುಗೊಳ್ಳುತ್ತದೆ ಎಂದು ರೋಟರಿ ಜಿಲ್ಲಾ ವಾರ್ಷಿಕ ನಿಧಿ ಚೆರ್ಮನ್ ಸೂರ್ಯನಾರಾಯಣ ಕುಕ್ಕಾಡಿ ಹೇಳಿದರು.
ಇಲ್ಲಿನ ಬಿ.ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ ಮಂಗಳೂರು ಚೆಸ್ ಮಾಸ್ಟರ್ ಸಂಸ್ಥೆ ವತಿಯಿಂದ ಬಿ.ಸಿ. ರೋಡು ಸಿಟಿ ಮತ್ತು ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ರ್‍ಯಾಪಿಡ್ ಚೆಸ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.
ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮೆಲ್ಕಾರ್, ಬಿಜೆಪಿ ಮುಖಂಡ ಕೆ.ಹರಿಕೃಷ್ಣ ಬಂಟ್ವಾಳ್, ಪಿಂಗಾರ ಕೃಷಿ ಉತ್ಪಾದಕ ಸಂಸ್ಥೆ ನಿರ್ದೇಶಕಿ ಸಾಯಿಗೀತಾ ಅಳಿಕೆ ಮಾತನಾಡಿದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬಿ.ಸಿ.ರೋಡು ಸಿಟಿ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಕೆ.ಸತೀಶ್ ಕುಮಾರ್, ಕಾರ್ಯದರ್ಶಿ ಪೃಥ್ವಿರಾಜ್, ಮುಖಂಡ ಗಣೇಶ್ ಶೆಟ್ಟಿ ಗೋಳ್ತಮಜಲು, ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫರ್ನಾಂಡಿಸ್, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಪ್ರಮುಖರಾದ ಆಂಟನಿ ಸಿಕ್ವೆರಾ, ಪದ್ಮರಾಜ ಬಲ್ಲಾಳ್ ಮಾತಂತೂರು, ರಾಘವೇಂದ್ರ ಭಟ್, ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಗೀತಾ ಪಿ.ಬಲ್ಲಾಳ್, ಪ್ರಶಾಂತ್ ಕಾರಂತ್, ಪಲ್ಲವಿ ಕಾರಂತ್, ಸಿದ್ಧಕಟ್ಟೆ ವಲಯ ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಚಿನ್ನಪ್ಪ ಕೆ.ಜಾಲ್ಸೂರು, ಸುಭಾಶ್ಚಂದ್ರ ಜೈನ್, ಜಯಪ್ರಕಾಶ್ ಜೆ.ಎಸ್., ರಾಜೇಶ್ ರಾಜಲಕ್ಷ್ಮಿ, ಸುಧೀರ್ ಶೆಟ್ಟಿ, ಉಮೇಶ್ ನೆಲ್ಲಿಗುಡ್ದೆ, ದಿನೇಶ್ ಅಮಿನ್, ವಿಕ್ರಮ್ ಬಂಗೇರ, ವಜ್ರಾಕ್ಷಿ ವಿನೋದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.