ADVERTISEMENT

ದಕ್ಷಿಣ ಕನ್ನಡ: ತಾವರೆ ನೀರಿನ ತೊಟ್ಟಿಗೆ ಬಿದ್ದ ಮಗು ಸಾವು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:33 IST
Last Updated 14 ಡಿಸೆಂಬರ್ 2025, 7:33 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಪುತ್ತೂರು: ಮನೆಯ ಅಂಗಳದಲ್ಲಿದ್ದ ತಾವರೆ ಬೆಳೆಸಿದ್ದ ನೀರಿನ ತೊಟ್ಟಿಗೆ ಬಿದ್ದು ಒಂದು ವರ್ಷ ಎರಡು ತಿಂಗಳ ಗಂಡು ಮಗುವೊಂದು ಮೃತಪಟ್ಟ ಘಟನೆ ನಗರದ ಹೊರವಲಯದ ಬನ್ನೂರು ಗ್ರಾಮದ ನೀರ್ಪಾಜೆ ಎಂಬಲ್ಲಿ ನಡೆದಿದೆ.

ಬನ್ನೂರು ಗ್ರಾಮದ ನೀರ್ಪಾಜೆ ನಿವಾಸಿ ಪ್ರಶಾಂತ್ ಗೌಡ ಮತ್ತು ರಂಜನಿ ದಂಪತಿಯ ಪುತ್ರ ಸ್ವರತ್ ಮೃತಪಟ್ಟ ಮಗು. 

ADVERTISEMENT

ಶನಿವಾರ ಮಧ್ಯಾಹ್ನ ತಮ್ಮ ಮನೆಯಂಗಳದಲ್ಲಿ ಮಗುವಿಗೆ ಊಟ ಮಾಡಿಸುತ್ತಿದ್ದ ತಾಯಿ ಮಗುವನ್ನು ಮನೆಯಂಗಳದಲ್ಲಿ ಬಿಟ್ಟು ಮನೆಯೊಳಗೆ ಹೋಗಿ ಬರುವ ವೇಳೆಗೆ ಮಗು ನಾಪತ್ತೆಯಾಗಿತ್ತು. ಹುಡುಕಾಡಿದಾಗ ತಾವರೆ ಬೆಳೆಸಿದ್ದ ನೀರಿನ ತೊಟ್ಟಿಯಲ್ಲಿ ಮಗು ಕಂಡು ಬಂದಿದೆ. ಕೂಡಲೇ ಮಗುವನ್ನು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದರೂ ಆ ವೇಳೆಗಾಗಲೇ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.