Photos: ಮಳೆ– ಸಾಗುವಾನಿ ಮರದ ಎಲೆಹಿಡಿದು ರಕ್ಷಣೆ ಪಡೆದ ಮಕ್ಕಳು- ಸೇತುವೆ ಕಾಮಗಾರಿ ನಿಧಾನ
ಸಂಪರ್ಕ ಸೇತುವೆ... ಮಂಗಳೂರು ಹೊರವಲಯದ ಅಡ್ಯಾರ್ ಕಟ್ಟೆಯಿಂದ ಪಾವೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ. ಘಟ್ಟ ಪ್ರದೇಶದಲ್ಲಿ ಮಳೆ ಹೆಚ್ಚಾದಾಗ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾದರೆ ಪಾವೂರು ಹೋಗುವ ಜನರಿಗೆ ದೋಣಿ ಸಂಪರ್ಕವೂ ಸಿಗುವುದಿಲ್ಲ. ರಸ್ತೆ ದಾರಿಯಲ್ಲಿ ಸುಮಾರು 25 ಕಿ.ಮೀ. ಸುತ್ತಿ ಬಳಸಿ ಸಾಗಬೇಕಾದ ಅನಿವಾರ್ಯತೆಯಿದೆ. (ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್)----ಮಳೆಯ ಆಟ... ಒಮ್ಮೆಲೇ ಸುರಿದ ಮಳೆಗೆ, ಛತ್ರಿ ತರಲು ಮರೆತಿದ್ದ ಮಕ್ಕಳು ಸಾಗುವಾನಿ ಮರದ ಎಲೆಹಿಡಿದು ರಕ್ಷಣೆ ಪಡೆದ ದೃಶ್ಯ ಮಂಗಳೂರು ಹೊರವಲಯದ ಕೋಟೆಕಾರು ಬೀರಿಯಲ್ಲಿ ಶುಕ್ರವಾರ ಕಂಡು ಬಂತು – (ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್)
ಪ್ರಜಾವಾಣಿ ವಾರ್ತೆ
Published 23 ಜುಲೈ 2021, 10:10 IST
Last Updated 23 ಜುಲೈ 2021, 10:10 IST
ಮಳೆಯ ಆಟ... ಒಮ್ಮೆಲೇ ಸುರಿದ ಮಳೆಗೆ, ಛತ್ರಿ ತರಲು ಮರೆತಿದ್ದ ಮಕ್ಕಳು. (ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್)
ಛತ್ರಿ ತರಲು ಮರೆತಿದ್ದ ಮಕ್ಕಳು ಸಾಗುವಾನಿ ಮರದ ಎಲೆಹಿಡಿದು ರಕ್ಷಣೆ ಪಡೆದ ದೃಶ್ಯ. (ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್)
ಮಂಗಳೂರು ಹೊರವಲಯದ ಕೋಟೆಕಾರು ಬೀರಿಯಲ್ಲಿ ಶುಕ್ರವಾರ ಕಂಡು ಬಂದ ದೃಶ್ಯ. (ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್)
ಮಂಗಳೂರು ಹೊರವಲಯದ ಅಡ್ಯಾರ್ ಕಟ್ಟೆಯಿಂದ ಪಾವೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ನಿಧಾನ. (ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್)
ಘಟ್ಟ ಪ್ರದೇಶದಲ್ಲಿ ಮಳೆ ಹೆಚ್ಚಾದಾಗ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾದರೆ ಪಾವೂರು ಹೋಗುವ ಜನರಿಗೆ ದೋಣಿ ಸಂಪರ್ಕವೂ ಸಿಗುವುದಿಲ್ಲ. (ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್)