ADVERTISEMENT

ದಕ್ಷಿಣ ಕನ್ನಡ, ಉಡುಪಿ ಒಂದೇ ಘಟಕ: ಸರ್ಕಾರ ಆದೇಶ

​ಪ್ರಜಾವಾಣಿ ವಾರ್ತೆ
Published 11 ಮೇ 2020, 12:29 IST
Last Updated 11 ಮೇ 2020, 12:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಈಗ ಜಾರಿಯಲ್ಲಿರುವ ಲಾಕ್‌ಡೌನ್‌ ಅವಧಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಂದು ಘಟಕವಾಗಿ ಪರಿಗಣಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ದಿನಗಳಲ್ಲಿ ಹಗಲಿನ ವೇಳೆ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಚಲಿಸುವ ಉದ್ದೇಶದಿಂದ ಒಂದೇ ಘಟಕವಾಗಿ ಪರಿಗಣಿಸಲಾಗುವುದು. ವ್ಯಕ್ತಿಗಳು ಕೆಲಸ ಮಾಡುತ್ತಿರುವ ಕಂಪನಿ, ಸಂಸ್ಥೆಗಳಿಂದ ನೀಡಲಾಗುವ ಪತ್ರದ ಮೇರೆಗೆ ಮತ್ತು ಕಂಪನಿ,ಸಂಸ್ಥೆಯ ಅಧಿಕೃತ ಗುರುತಿನ ಚೀಟಿಯೊಂದಿಗೆ ಮಾತ್ರ ಚಲನವಲನಗಳಿಗೆ ಅನುಮತಿಸಿದೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಚಲನೆಗೆ ಬೇರೆ ಯಾವುದೇ ಅಂತರ್ ಜಿಲ್ಲಾ ಪಾಸ್‌ಗಳ ಅವಶ್ಯಕತೆ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆದರೆ, ಇತರೆ ಜಿಲ್ಲೆಗಳಿಗೆ ಅನುಮತಿಸಲಾದ ಚಟುವಟಿಕೆಗಳಿಗೆ ಅಂತರ ಜಿಲ್ಲೆಗಳ ಸಂಚಾರಕ್ಕೆ ಪಾಸ್ ಅಗತ್ಯವಿರುತ್ತದೆ ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.