ಪುತ್ತೂರು (ದಕ್ಷಿಣ ಕನ್ನಡ):ತಾಲ್ಲೂಕಿನ ಬಡಗನ್ನೂರು ಗ್ರಾಮದ ಪಾದೆಕರ್ಯದಲ್ಲಿ ಕೃಷಿಕ ದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಬ್ರಹ್ಮಣ್ಯ ಭಟ್ (84) - ಶಾರದಾಭಟ್ (78) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇಬ್ಬರೂಭಾನುವಾರ ರಾತ್ರಿ ಊಟ ಮಾಡಿ ಮನೆಯ ಕೆಳಗಿನ ಅಂತಸ್ತಿನ ಕೋಣೆಯಲ್ಲಿ ಮಲಗಿದ್ದರು. ಪುತ್ರ, ಅವರ ಪತ್ನಿ ಮತ್ತು ಮಕ್ಕಳು ಮಹಡಿಯ ಕೋಣೆಯಲ್ಲಿ ಮಲಗಿದ್ದರು.
ಪುತ್ರ ಸೋಮವಾರ ಬೆಳಿಗ್ಗೆಎದ್ದುನೋಡಿದಾಗದಂಪತಿ ಪ್ರತ್ಯೇಕ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದುಕಂಡು ಬಂದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.