ADVERTISEMENT

ಸರಪಾಡಿ ಶರಭೇಶ್ವರ ದೇವಸ್ಥಾನ: ಗರ್ಭಗುಡಿ ಚಾವಣಿಗೆ ಹೊದಿಕೆ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 4:44 IST
Last Updated 25 ಫೆಬ್ರುವರಿ 2023, 4:44 IST
ಬಂಟ್ವಾಳ ತಾಲ್ಲೂಕಿನ ಸರಪಾಡಿ ಶರಭೇಶ್ವರ ದೇವಸ್ಥಾನದಲ್ಲಿ ಪ್ರಧಾನ ಗರ್ಭಗುಡಿ ಚಾವಣಿಗೆ ಮರದ ಹೊದಿಕೆ ಅಳವಡಿಸುವ ಮುಹೂರ್ತ ಕಾರ್ಯಕ್ರಮ ನೆರವೇರಿತು
ಬಂಟ್ವಾಳ ತಾಲ್ಲೂಕಿನ ಸರಪಾಡಿ ಶರಭೇಶ್ವರ ದೇವಸ್ಥಾನದಲ್ಲಿ ಪ್ರಧಾನ ಗರ್ಭಗುಡಿ ಚಾವಣಿಗೆ ಮರದ ಹೊದಿಕೆ ಅಳವಡಿಸುವ ಮುಹೂರ್ತ ಕಾರ್ಯಕ್ರಮ ನೆರವೇರಿತು   

ಬಂಟ್ವಾಳ: ಇಲ್ಲಿನ ಜೀರ್ಣೋದ್ಧಾರ ಹಂತದಲ್ಲಿರುವ ಸರಪಾಡಿ ಶರಭೇಶ್ವರ ದೇವಸ್ಥಾನದಲ್ಲಿ ಪ್ರಧಾನ ಗರ್ಭಗುಡಿ ಚಾವಣಿಗೆ ಮರದ ಹೊದಿಕೆ ಅಳವಡಿಸುವ ಮುಹೂರ್ತ ಕಾರ್ಯಕ್ರಮ ನೆರವೇರಿತು.

ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಮತ್ತು ಪುರೋಹಿತ ವಿಜಯಕೃಷ್ಣ ಐತಾಳ್ ಪೂಜಾ ವಿಧಾನ ನೆರವೇರಿಸಿದರು. ಅರ್ಚಕ ಜಯರಾಮ ಕಾರಂತ, ದಾರುಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಪ್ರಮುಖರಾದ ವಿಠಲ ಎಂ. ಆರುಮುಡಿ, ಉಮೇಶ್ ಆಳ್ವ ಕೊಟ್ಟುಂಜ, ಕುಸುಮಾಕರ ಶೆಟ್ಟಿ, ರಾಧಾಕೃಷ್ಣ ರೈ ಕೊಟ್ಟುಂಜ, ಪುರುಷೋತ್ತಮ ಪೂಜಾರಿ ಮಜಲು, ಗಿರಿಧರ್ ನಾಯ್ಕ್ ಎಸ್., ಪ್ರಕಾಶ್ಚಂದ್ರ ಆಳ್ವ, ದಯಾವತಿ ಮಠದಬೆಟ್ಟು, ಕೊರಗಪ್ಪ ಗೌಡ ಪಠಣ, ಸುರೇಂದ್ರ ಪೈ ಸರಪಾಡಿ, ರಾಹುಲ್ ಕೋಟ್ಯಾನ್, ಚೇತನ್ ಬಜ, ಕಿಶನ್ ಸರಪಾಡಿ, ನಾರಾಯಣ ದೇವಾಡಿಗ ಹೊಳ್ಳರಗುತ್ತು, ಯೋಗೀಶ್ ಗೌಡ ನೀರೊಲ್ಬೆ, ಗಿರೀಶ್ ನಾಯ್ಕ್ ನೀರಪಲ್ಕೆ, ಆನಂದ ಶೆಟ್ಟಿ ಆರುಮುಡಿ, ಬಾಲಕೃಷ್ಣ ಪೂಜಾರಿ ಕೊಟ್ಟುಂಜ, ನವೀನ್ ಪೂಜಾರಿ ಕೊಡಂಗೆ, ಆನಂದ ಶೆಟ್ಟಿ ಬಾಚಕೆರೆ, ಶಂಕರ ಮೂಲ್ಯ ಮಠದಬೆಟ್ಟು, ಶಿವರಾಮ ಭಂಡಾರಿ, ಚಂದ್ರಶೇಖರ ನಾಯ್ಕ್, ಎಸ್.ಪಿ.ಸರಪಾಡಿ, ಹರೀಶ್ ಮಠದಬೆಟ್ಟು, ದೇವಪ್ಪ ಪೂಜಾರಿ ಹೊಸಮನೆ, ನವೀನ್ ನಾಯ್ಕ್ ಲಕ್ಷ್ಮೀಪಲ್ಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT