ಪುತ್ತೂರು: ಭಾರಿ ಮಳೆಯಿಂದಾಗಿ ತಾಲ್ಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಎಂಬಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ನಿಡ್ಪಳ್ಳಿ ಗ್ರಾಮದ ಮುಂಡೂರು ಎಂಬಲ್ಲಿ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ.
ಮಾಡಾವು ಶಾಲೆ ಬಳಿಯ ನಿವಾಸಿ ಸಾಬು ಬ್ಯಾರಿ ಎಂಬುವರ ಹೆಂಚಿನ ಚಾವಣಿ ಮೇಲೆ ಹಿಂಭಾಗದ ಗೋಡೆ ಬುಧವಾರ ರಾತ್ರಿ ಕುಸಿದಿದ್ದು, ವಿದ್ಯುತ್ ಸಂಪರ್ಕ ವ್ಯವಸ್ಥೆ, ಶೇಖರಿಸಿಟ್ಟಿದ್ದ ಕೆಲವು ಸಾಮಗ್ರಿಗೆ ಹಾನಿಯಾಗಿದೆ. ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ.
ಕೆಯ್ಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್‌ಕುಮಾರ್ ಮಾಡಾವು, ಪಂಚಾಯಿತಿ ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಗ್ರಾಮ ಪಿಡಿಒ ನಮಿತಾ ಕೆ., ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಆಡಳಿತಾಧಿಕಾರಿ ಸ್ವಾತಿ, ಗ್ರಾಮ ಸಹಾಯಕ ನಾರಾಯಣ ಪಾಟಾಳಿ ಭೇಟಿ ನೀಡಿ ಪರಿಶೀಲಿಸಿದರು.
ಮುಂಡೂರು ನಿವಾಸಿ ವಿಶ್ವೇಶ್ವರ ಭಟ್ ಅವರ ಹೆಂಚಿನ ಮನೆ ಮೇಲೆ ಮರ ಉರುಳಿ ಪಕ್ಕಾಸು, ಹೆಂಚುಗಳು ಹಾನಿಗೀಡಾಗಿವೆ. ಗ್ರಾಮ ಆಡಳಿತಾಧಿಕಾರಿ ಸುನೀತಾ ಕೆ., ಸಹಾಯಕಿ ಜಯಶ್ರೀ ಭೇಟಿ ನೀಡಿ ಪರಿಶೀಲಿಸಿದುರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.