ADVERTISEMENT

ದಕ್ಷಿಣ ಕನ್ನಡ: ‘ನೃತ್ಯ ವಾಹಿನಿ’ ನಟನೆಯ ಸಮ್ಮೋಹನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:45 IST
Last Updated 14 ಡಿಸೆಂಬರ್ 2025, 7:45 IST
ಸೃಷ್ಟಿ ಫೌಂಡೇಷನ್ ಕಲಾವಿದರು ಪ್ರದರ್ಶಿಸಿದ ‘ರಾಮ’ ರೂಪಕ
ಸೃಷ್ಟಿ ಫೌಂಡೇಷನ್ ಕಲಾವಿದರು ಪ್ರದರ್ಶಿಸಿದ ‘ರಾಮ’ ರೂಪಕ   

ಮಂಗಳೂರು: ಸನಾತನ‌ ನಾಟ್ಯಾಲಯ ಹಾಗೂ ನೃತ್ಯಾಂಗನ್, ಈ ಎರಡು ಕಲಾ ಸಂಸ್ಥೆಗಳು ಜಂಟಿಯಾಗಿ ಮೂರು ವಿಭಿನ್ನ ನೃತ್ಯ ಪ್ರಯೋಗಗಳೊಂದಿಗೆ ಹಮ್ಮಿಕೊಂಡಿದ್ದ ‘ನೃತ್ಯ ವಾಹಿನಿ’ ನೃತ್ಯ ಪ್ರದರ್ಶನವು ಪ್ರೇಕ್ಷಕರ ಮನಗೆದ್ದಿತು.

ಮೊದಲ ಪ್ರಯೋಗ ಪ್ರದರ್ಶಿಸಿದವರು ಯುವಕಲಾವಿದೆ ಅನಘ ಜಿ. ಎಸ್. ಸ್ಪಷ್ಟವಾದ ಹೆಜ್ಜೆಗಳು, ಚೆಲುವಾದ ಅಂಗಶುದ್ಧಿ ಹಾಗು ಪ್ರಬುದ್ದ ಅಭಿನಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎರಡನೆಯ ಪ್ರದರ್ಶನ ‘ಪೂತನ’ ರಂಗರೂಪಾತ್ಮಕ ಪ್ರಯೋಗ. ಪುಣೆಯ ಸ್ವರದ ಭಾವೆ ಹಾಗೂ ಈಶ ಪಿಂಗ್ಳೈ ಕಲಾವಿದರ ಜೋಡಿ ರಾಕ್ಷಸಿ ಪೂತನಿಯ ಮನದ ಮಾತುಗಳನ್ನು ತೆರೆದಿಟ್ಟರು. ದೇಹ ಭಾಷೆಯನ್ನು ಬಳಸಿಕೊಂಡು, ರಂಗಭೂಮಿಯ ಚಲನೆಗಳನ್ನು ಅಳವಡಿಸಿಕೊಂಡು, ಭರತನಾಟ್ಯದ ಜತಿಗಳ ಮೂಲಕವೇ ಪೂತನಿಯ ಕತೆಯನ್ನು ತಲುಪಿಸುವ ಪ್ರಯತ್ನ ಇದಾಗಿತ್ತು. ಪೃಥ್ವಿನ್ ಉಡುಪಿ ಬೆಳಕಿನ ವಿನ್ಯಾಸ ಮಾಡಿದ್ದರು.

ADVERTISEMENT

ಮೂರನೇ ಪ್ರಯೋಗ ‘ರಾಮ’ ರೂಪಕ. ಸೃಷ್ಟಿ ಫೌಂಡೇಶನ್‌ನ ಮಂಜರೀಚಂದ್ರ ಪುಷ್ಪರಾಜ್ ಬಳಗದವರು ರೂಪಕ ಪ್ರಸ್ತುತಪಡಿಸಿದರು. ಬಾಲಕೃಷ್ಣ ಕೊಡವೂರು ಬೆಳಕಿನ ವಿನ್ಯಾಸಕ್ಕೆ ಸಹಕರಿಸಿದರು. ಸನಾನತ ನಾಟ್ಯಾಲಯದ ವಿದುಷಿ ಶ್ರೀಲತಾ ನಾಗರಾಜ್ ಹಾಗೂ ನೃತ್ಯಾಂಗನ್ ಸಂಸ್ಥೆಯ ರಾಧಿಕಾ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.