ಮಂಗಳೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಬಾಲಕಿಯರ ವಾಲಿಬಾಲ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲಾ ತಂಡಗಳ ನಡುವಿನ ಸೆಣಸಾಟ. ಮೈಸೂರು ರನ್ನರ್ ಅಪ್ ಅಯಿತು
ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರು: ಮೈಸೂರು ಮತ್ತು ಆತಿಥೇಯ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳು ದಸರಾ ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟದ ಕುಸ್ತಿ ಮ್ಯಾಟ್‌ನಲ್ಲಿ ಮಿಂಚಿದರು. ಪುರುಷರ 125 ಕೆಜಿ ಫ್ರೀಸ್ಟೈಲ್‌ನಲ್ಲಿ ಆತಿಥೇಯ ದಕ್ಷಿಣ ಕನ್ನಡದ ಕಾರ್ತಿಕ್, ಗ್ರೀಕೊ ರೋಮನ್ 97+ಕೆಜಿ ವಿಭಾಗದಲ್ಲಿ ದಕ್ಷಿಣ ಕನ್ನಡದ ನಿಖಿಲ್ ಮತ್ತು ಮಹಿಳೆಯರ 76 ಕೆಜಿ ಫ್ರೀಸ್ಟೈಲ್‌ನಲ್ಲಿ ಉಡುಪಿ ಜಿಲ್ಲೆಯ ಗಾಯತ್ರಿ ಚಾಂಪಿಯನ್ ಆದರು.
ಮಂಗಳ ಕ್ರೀಡಾಂಗಣದ ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸ್ಪರ್ಧೆಗಳಲ್ಲಿ ಪುರುಷರ ಗ್ರೀಕೊ ರೋಮನ್ ಮತ್ತು ಫ್ರೀಸ್ಟೈಲ್ ಒಳಗೊಂಡ 21 ವಿಭಾಗಗಳ ಪೈಕಿ ತಲಾ 9ರಲ್ಲಿ ದಕ್ಷಿಣ ಕನ್ನಡ ಮತ್ತು ಮೈಸೂರು ಚಿನ್ನದ ಪದಕ ಗಳಿಸಿತು. 8ರಲ್ಲಿ ಮೈಸೂರು ಚಿನ್ನ ಗೆದ್ದುಕೊಂಡಿತು. ಮಹಿಳೆಯರ ಫ್ರೀಸ್ಟೈಲ್‌ನ 10 ಸ್ಪರ್ಧೆಗಳ ಪೈಕಿ 6ರಲ್ಲಿ ದಕ್ಷಿಣ ಕನ್ನಡ ಚಿನ್ನ ಗೆದ್ದುಕೊಂಡಿತು.
ಫಲಿತಾಂಶಗಳು:
ಪುರುಷರ ಫ್ರೀಸ್ಟೈಲ್: 125 ಕೆಜಿ: ಕಾರ್ತಿಕ್ (ದಕ)–1, ಸುದರ್ಶನ್ (ದಕ)–2, ಹರ್ಷಿತ್ (ಉಡುಪಿ)–3; 97 ಕೆಜಿ: ಮನೋಜ್ (ಮಂಡ್ಯ)–1, ಶಂಕರ್ (ದಕ)–2; 92 ಕೆಜಿ: ದರ್ಶನ್ ಎ.ಎಸ್ (ಮೈಸೂರು)–1, ರಜಿತ್ (ದಕ)–2, ಶರತ್ ಕುಮಾರ್ (ಮಂಡ್ಯ)–3; 86ಕೆಜಿ: ಸಂಜಯ್ ಚಂದ್ರ (ಮೈಸೂರು)–1, ಪ್ರವೀಣ್ ಕುಮಾರ್ (ಮಂಡ್ಯ)–2, ಪ್ರತೀತ್ (ದಕ)–3; 79 ಕೆಜಿ: ಮಹಮ್ಮದ್ ಎಫ್ (ಮೈಸೂರು)–1, ಮನೋಜ್ (ದಕ)–2, ಶಿವರಾಜ್ (ದಕ), ಶಶಾಂಕ್ ರಾಜ್ (ಮೈಸೂರು)–3; 74 ಕೆಜಿ: ಹರ್ಷವರ್ಧನ್ (ಮೈಸೂರು)–1, ಗಗನ್ (ದಕ)–2, ನಿಶಾಂತ್ ಗೌಡ (ಮಂಡ್ಯ), ಸಜ್ಜನ್ (ಉಡುಪಿ)–3; 70 ಕೆಜಿ: ಸೂರಜ್ (ಮಂಡ್ಯ)–1, ಮನೋಜ್ (ದಕ)–2, ಮೋಹನ್ (ಮೈಸೂರು), ಪವನ್ (ಚಿಕ್ಕಮಗಳೂರು)–3; 65ಕೆಜಿ: ಗುರು ರಕ್ಷಣ್ (ಮೈಸೂರು)–1, ನಿಖಿಲ್ (ದಕ)–2, ಚೇತನ್ ರಾಜ್ (ಹಾಸನ), ರಂಜನ್ (ದಕ)–3; 61 ಕೆಜಿ: ಅರುಣ್ (ದಕ)–1, ಹರ್ಷಿತ್ (ಮಂಡ್ಯ)–2, ದಿಶಾಂತ್ ಗೌಡ (ಮೈಸೂರು)–3; 57ಕೆಜಿ: ರಘುನಾಥ್ (ದಕ)–1, ಪ್ರಕಾಶ್ (ಚಿಕ್ಕಮಗಳೂರು)–2, ಮೋಹಿತ್ (ಮಂಡ್ಯ), ಪ್ರತಾಪ್ (ಮೈಸೂರು)–3.
ಗ್ರೀಕೊ ರೋಮನ್: 97+ಕೆಜಿ: ನಿಖಿಲ್ (ದಕ)–1, ಮೊಹಮ್ಮದ್ ಶೇಕ್ (ಮೈಸೂರು)–2; 97 ಕೆಜಿ: ಕೃಷ್ಣ (ದಕ)–1, ನವೀನ್ ಕುಮಾರ್ (ಮೈಸೂರು)–2, ಪರಮೇಶ್ (ಮೈಸೂರು)–1, ಲೋಹಿತ್ ಗೌಡ (ಮೈಸೂರು)–2, ಕುಶಾಲ್ (ಚಿಕ್ಕಮಗಳೂರು), ವಿರಾಜ್ (ಉಡುಪಿ)–3; 82 ಕೆಜಿ: ವಿನಯ ಕುಮಾರ್ (ಮೈಸೂರು)–1, ವಿಜಯೇಂದ್ರ (ಮೈಸೂರು)–2, ನಂದ ಕೃಷ್ಣ (ದಕ)–3; 77 ಕೆಜಿ: ರಾಕೇಶ್ ಎನ್ (ಮೈಸೂರು)–1, ನಿಧಿನ್ (ದಕ)–2, ಗಂಗರಾಜ್ (ಹಾಸನ)–3, ಭರತ್ ಚಂದ್ರ (ಮೈಸೂರು)–3; 72 ಕೆಜಿ: ತುಷಾರ್ ಗೌಡ (ಮೈಸೂರು)–1, ನಂದನ್ ಗೌಡ (ಮೈಸೂರು)–2, ಯುವರಾಜ್ (ಮೈಸೂರು), ವರುಣ್ (ಉಡುಪಿ)–3; 67 ಕೆಜಿ: ಗುಡಪ್ಪ (ದಕ)–1, ಗಂಗರಾಜ್ (ಮೈಸೂರು)–2, ಸಾಗರ್ (ಮೈಸೂರು)–3; 63 ಕೆಜಿ: ಶಶಿಕುಮಾರ್ (ದಕ)–1, ಹರ್ಷ ಗೌಡ (ಮೈಸೂರು)–2, ಸುಜಯ್ (ಉಡುಪಿ), ರಮೇಶ್ (ಮೈಸೂರು)–3; 60 ಕೆಜಿ: ಮನೋಜ್ ಆರ್‌ಕೆ (ದಕ)–1, ಪ್ರೀತಂ (ಮಂಡ್ಯ)–2, ಅಭಿಷೇಕ್ (ಚಿಕ್ಕಮಗಳೂರು), ಸನ್ವಿತ್ (ಉಡುಪಿ)–3; 55 ಕೆಜಿ: ಧರ್ಮರಾಜ್ (ದಕ)–1, ವಿಕಾಸ್ (ಚಿಕ್ಕಮಗಳೂರು)–2, ಹರ್ಷಿತ್ (ದಕ), ಆರ್ಯ (ಉಡುಪಿ)–3.
ಮಹಿಳೆಯರು: 76 ಕೆಜಿ: ಗಾಯತ್ರಿ (ಉಡುಪಿ)–1, ಹೃಲೇಖಾ (ದಕ)–2, ನವ್ಯಶ್ರೀ (ದಕ), ವಾತ್ಸಲ್ಯ (ಉಡುಪಿ)–3; 72 ಕೆಜಿ: ಜಾನ್ವಿ (ದಕ)–1, ಷಾಸ್ಯ (ದಕ)–2, ಮಾನಸ (ಮೈಸೂರು)–3;68 ಕೆಜಿ: ಮಾನ್ಯಾ (ದಕ)–1, ಚೈತ್ರಿಕಾ (ದಕ)–2, ಅನುಷಾ (ಉಡುಪಿ), ಗೌರಿ (ಮೈಸೂರು)–3; 65 ಕೆಜಿ: ಅದಿತಿ ಶೆಟ್ಟಿ (ದಕ)–1, ಶಕೀರ (ದಕ)–2, ಹರ್ಷಿಣಿ (ಉಡುಪಿ), ವರ್ಷಿತಾ (ಮೈಸೂರು)–3; 62ಕೆಜಿ: ರೀತು (ಮೈಸೂರು)–1, ಊರ್ಮಿಳಾ (ದಕ)–2, ಸ್ಫೂರ್ತಿ (ದಕ)–3; 59 ಕೆಜಿ: ಚಿತ್ರಾ (ದಕ)–1, ತೇಜಸ್ವಿನಿ (ದಕ)–2, ಮೇಘನಾ (ಉಡುಪಿ)–3; 57 ಕೆಜಿ: ಚೈತನ್ಯಾ (ಮೈಸೂರು)–1, ಅಂಜು ಶೆಟ್ಟಿ (ದಕ)–2, ಪೂರ್ಣಿಮಾ (ಉಡುಪಿ), ಖುಷಿ (ದಕ)–3; 55ಕೆಜಿ: ನಂದಿನಿ (ಮೈಸೂರು)–1, ರಿಷಾ (ಉಡುಪಿ)–2, ಮೃದುಲಾ, ಮನ್ವಿತಾ (ದಕ)–3; 53 ಕೆಜಿ: ಚಂದ್ರಿಕಾ (ದಕ)–1, ಶ್ಯಾಮಲಾ (ದಕ)–2, ಪ್ರೇಕ್ಷಾ (ಉಡುಪಿ), ಜೀವಿಕಾ (ಮೈಸೂರು)–3; 50 ಕೆಜಿ: ದೀಕ್ಷಾ (ದಕ)–1, ಯಶಸ್ವಿನಿ (ಮೈಸೂರು)–2, ತ್ರಿವೇಣಿ (ದಕ), ಲಕ್ಷ್ಮಿ (ಮೈಸೂರು)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.