ADVERTISEMENT

ಸುಳ್ಯ | ಮಂಡೆಕೋಲು: 12 ಮಂದಿಗೆ ಡೆಂಗಿ ಜ್ವರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 17:58 IST
Last Updated 19 ಏಪ್ರಿಲ್ 2020, 17:58 IST
ಸೊಳ್ಳೆ (ಪ್ರಾತಿನಿಧಿಕ ಚಿತ್ರ)
ಸೊಳ್ಳೆ (ಪ್ರಾತಿನಿಧಿಕ ಚಿತ್ರ)   

ಸುಳ್ಯ: ಕೊರೊನಾ ಸೋಂಕು ಭೀತಿಯ ನಡುವೆ ಸುಳ್ಯ ತಾಲ್ಲೂಕಿನ ಮಂಡೆಕೋಲು ಗ್ರಾಮದ ಪೇರಾಲು ಕಾಡುಸೊರಂಜ ಪರಿಸರದಲ್ಲಿ 12 ಮಂದಿಗೆ ಡೆಂಗಿ ಕಾಣಿಸಿಕೊಂಡಿದೆ.

ಇವರಿಗೆ ಏಕಕಾಲದಲ್ಲಿ ಜ್ವರ ಕಾಣಿಸಿಕೊಂಡಿದ್ದು, ರಕ್ತಪರೀಕ್ಷೆಯಿಂದ ಡೆಂಗಿ ಜ್ವರ ಎಂದು ಗೊತ್ತಾಗಿದೆ. ಸುಳ್ಯದ ಸರ್ಕಾರಿ ಆಸ್ಪತ್ರೆ, ಕೆ.ವಿ.ಜಿ. ಆಸ್ಪತ್ರೆ, ಪುತ್ತೂರಿನ ಆದರ್ಶ ಆಸ್ಪತ್ರೆ ಮತ್ತು ಸಿಟಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಗುಣಮುಖರಾಗಿದ್ದಾರೆ.

ಇದೀಗ ಕಾಡುಸೊರಂಜದ ಪಕ್ಕದ ಕೊಡೆಂಚಿಕಾರ್ ಪ್ರದೇಶಕ್ಕೂ ಡೆಂಗಿ ಜ್ವರ ವಿಸ್ತರಿಸಿದೆ ಎಂಬ ಮಾಹಿತಿ ಇದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆ, ಮನೆಗೆ ತೆರಳಿ ತಪಾಸಣೆ ಆರಂಭಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.