ADVERTISEMENT

ಡೀಸೆಲ್ ಕಳವು: ಪ್ರಮುಖ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 4:52 IST
Last Updated 12 ಆಗಸ್ಟ್ 2021, 4:52 IST
ಐವನ್ ಪಿಂಟೊ
ಐವನ್ ಪಿಂಟೊ   

ಬಂಟ್ವಾಳ: ಇಲ್ಲಿನ ಸೋರ್ಣಾಡು ಸಮೀಪ ಅರಳ ಗ್ರಾಮದ ಅರ್ಬ ಎಂಬಲ್ಲಿ ಮಂಗಳೂರು–ಬೆಂಗಳೂರು ನಡುವಿನ ಡೀಸೆಲ್ ಪೂರೈಸುವ ಪೈಪ್‌ಲೈನ್‌ಗೆ ಕನ್ನ ಕೊರೆದು ಸುಮಾರು ₹ 40 ಲಕ್ಷ ಮೌಲ್ಯದ ಡೀಸೆಲ್ ಕಳವು ಮತ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಮುಖ ಆರೋಪಿ ಐವನ್ ಪಿಂಟೊ ಸಹಿತ ಮೂವರನ್ನು ಮಂಗಳವಾರ ಬಂಧಿಸಿ
ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವೆಲ್ಡರ್ ವೃತ್ತಿಯಲ್ಲಿರುವ ಪಚ್ಚನಾಡಿ ಬೋಂದೆಲ್ ನಿವಾಸಿ ಅಜಿತ್ ಮತ್ತು ಕಣ್ಣೂರು ನಿವಾಸಿ ಜೋಯೆಲ್ ಪ್ರೀತಂ ಡಿಸೋಜ ಇವರಿಬ್ಬರನ್ನು ಬಂಧಿಸಲಾಗಿದೆ. ಇತರ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಎಸ್‌ಐ ಪ್ರಸನ್ನ ಎಂ. ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

2009ರಲ್ಲಿ ಇಲ್ಲಿಗೆ ಸಮೀಪದ ಪಂಜಿಕಲ್ಲು ಪದವು ಅರಣ್ಯ ಇಲಾಖೆ ಜಮೀನಿನ ಬಳಿ ನಡೆಯುತ್ತಿದ್ದ ಕೆಂಪು ಕಲ್ಲಿನ ಕ್ವಾರೆ ಬಳಿ ಡೀಸೆಲ್ ಕಳವು ದಂಧೆ ಪತ್ತೆಯಾಗಿರುವುದನ್ನು ಇಲ್ಲಿ ಉಲ್ಲೇಖನೀಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.