ADVERTISEMENT

ಡ್ರೋನ್, ಯುಎವಿ: ಪೊಲೀಸರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 15:30 IST
Last Updated 29 ಆಗಸ್ಟ್ 2022, 15:30 IST
ಡ್ರೋನ್, ಯುಎವಿ ಬಳಕೆ ಕುರಿತ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿ, ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ ಅವರಿಗೆ ವಿವರಣೆ ನೀಡಿದರು.
ಡ್ರೋನ್, ಯುಎವಿ ಬಳಕೆ ಕುರಿತ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿ, ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ ಅವರಿಗೆ ವಿವರಣೆ ನೀಡಿದರು.   

ಮಂಗಳೂರು: ಡ್ರೋನ್ ಕ್ಯಾಮೆರಾ, ಮಾನವ ರಹಿತ ವಿಮಾನ (ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್‌) ಬಳಕೆ ಕುರಿತು ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳು, ಮಂಗಳೂರು ಪೊಲೀಸ್ ಕಮಿಷನರೇಟ್ ಘಟಕದ ಒಟ್ಟು 27 ಅಧಿಕಾರಿ ಮತ್ತು ಸಿಬ್ಬಂದಿಗೆ ರಾಜ್ಯದಲ್ಲಿ ಪ್ರಥಮವಾಗಿ ಪಶ್ಚಿಮ ವಲಯದಲ್ಲಿ ತರಬೇತಿ ಆರಂಭವಾಗಿದ್ದು, ಬೆಂಗಳೂರಿನ ಆಂತರಿಕ ಭದ್ರತೆ ವಿಭಾಗದ ತಜ್ಞರ ತಂಡ ತರಬೇತಿ ನೀಡುತ್ತಿದೆ.

ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ ಅವರು ಎರಡು ವಾರಗಳ ತರಬೇತಿಯನ್ನು ಸೋಮವಾರ ಉದ್ಘಾಟಿಸಿದರು. ಪೊಲೀಸ್ ಅಧಿಕಾರಿಗಳಿಗೆ ಈ ತರಬೇತಿಯನ್ನು ದೇಶದಲ್ಲೇ ಮೊದಲು ಕರ್ನಾಟಕ ರಾಜ್ಯ ಹಮ್ಮಿಕೊಂಡಿದೆ. ತರಬೇತಿಯಲ್ಲಿ ಡ್ರೋನ್ ಕುರಿತ ವಿವರ ಮತ್ತು ಕಾನೂನುಗಳು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪರಿಕರಗಳ ಬಳಕೆ, ರಾತ್ರಿ ವೇಳೆ ಸೂಕ್ಷ್ಮ ಪ್ರದೇಶ, ಕಾಡು, ಬೆಟ್ಟ–ಗುಡ್ಡಗಳಲ್ಲಿ ಇವನ್ನು ಹಾರಿಸಿ, ಮಾಹಿತಿ ಸಂಗ್ರಹಿಸುವ ಬಗ್ಗೆ ಕೂಡ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT