ADVERTISEMENT

ಮಂಗಳೂರು | ಗಾಂಜಾ ಮಾರಾಟ: ಆರೋಪಿಗಳಿಬ್ಬರ ಬಂಧನ

ಮಾದಕ ಪದಾರ್ಥ ಮಾರಾಟ ನಿಗ್ರಹ ತಂಡದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 6:46 IST
Last Updated 6 ಫೆಬ್ರುವರಿ 2024, 6:46 IST
ಆದಿತ್ಯ
ಆದಿತ್ಯ   

ಮಂಗಳೂರು: ನಗರದ ಬಲ್ಮಠ ನ್ಯೂ ರೋಡ್‌ ಬಳಿ ನಿಷೇಧಿತ ಮಾದಕ ಪದಾರ್ಥ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ಉಪ ವಿಭಾಗದ ಮಾದಕ ಪದಾರ್ಥ ಮಾರಾಟ ನಿಗ್ರಹ ತಂಡದ ಪೊಲೀಸರು ಬಂಧಿಸಿದ್ದಾರೆ.

ಅತ್ತಾವರ ವೈದ್ಯನಾಥ ನಗರದ ಆದಿತ್ಯ ಕೆ. (29 ವರ್ಷ) ಹಾಗೂ ಅಡ್ಯಾರ್ ಪದವು ಲೋಬೊ ನಗರದ ಕೋರ‍್ದಬ್ಬು ದೈವಸ್ಥಾನದ ಬಳಿಯ ನಿವಾಸಿ ರೋಹನ್ ಸಿಕ್ವೇರ (33) ಬಂಧಿತರು.

ರೋಹನ್‌ ಸಿಕ್ವೇರಾ

ಆರೋಪಿಗಳಿಂದ 27 ಗ್ರಾಂ ಹೈಡ್ರೋವೀಡ್ ಗಾಂಜಾ (ಅಂದಾಜು ₹ 50ಸಾವಿರ ಮೌಲ್ಯ), 2.95 ಕೆ.ಜಿ ಗಾಂಜಾ (ಅಂದಾಜು ₹ 1 ಲಕ್ಷ ಮೌಲ್ಯ)  ಗಾಂಜ ಆ್ಯಷ್ ಆಯಿಲ್ (₹ 8 ಸಾವಿರ ಮೌಲ್ಯ) ಎಲ್.ಎಸ್.ಡಿ ಸ್ಟಾಂಪ್‌ (₹ 16,800 ಮೌಲ್ಯ ), ಎರಡು ಡಿಜಿಟಲ್ ಮಾಪನಗಳು, ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ಪೋನ್‌ಗಳು (₹ 90 ಸಾವಿರ ಮೌಲ್ಯ) ಹಾಗೂ ಕಪ್ಪು ಬಣ್ಣದ ಹುಂಡೈ ಕಾರು ಸೇರಿದಂತೆ ಒಟ್ಟು ₹ 20 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ADVERTISEMENT
ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತುಗಳು

ಎಸಿಪಿ ಪ್ರತಾಪ್ ಸಿಂಗ್ ತೋರಟ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಅಜ್ಮತ್ ಆಲಿ ಮತ್ತು ಪಿಎಸ್ ಐ ಪ್ರದೀಪ್ ಟಿ.ಆರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.