
ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಪೆರ್ನಾಜೆ ಪ್ರದೇಶಕ್ಕೆ ಸೋಮವಾರ ರಾತ್ರಿ ಕಾಡಾನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದೆ
ಪುತ್ತೂರು: ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಪ್ರದೇಶಕ್ಕೆ ನಾಲ್ಕು ದಿನಗಳಿಂದ ನಿರಂತರವಾಗಿ ಕಾಡಾನೆ ದಾಳಿ ಮಾಡಿ ಕೃಷಿ ಹಾನಿ ಮಾಡುತ್ತಿದೆ.
ಕೊಳ್ತಿಗೆ ಗ್ರಾಮದ ಕಟ್ಟಪುಣಿ ಭಾಗಕ್ಕೆ ಸೋಮವಾರ ರಾತ್ರಿ ದಾಳಿ ಮಾಡಿದ ಕಾಡಾನೆ ಕಿಶೋರ್‌ಕುಮಾರ್, ಸುಧೀರ್ ಜಿ.ಕೆ., ನಾರಾಯಣ ಗೌಡ ಅವರ ಕೃಷಿ ಹಾನಿ ಮಾಡಿದೆ. ಅಲ್ಲಿನ ಕೃಷಿಕರು ಗರ್ನಾಲ್ ಸಿಡಿಸಿದ ಬಳಿಕ ಕಾಡಾನೆ ಆ ಭಾಗದಿಂದ ತೆರಳಿದೆ. ಮಂಗಳವಾರ ಮುಂಜಾನೆ ವೇಳೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕುಮಾರ್ ಪೆರ್ನಾಜೆ ಅವರ ಕೃಷಿ ದಾಳಿ ಮಾಡಿ ಬಾಳೆ ಮತ್ತು ಅಡಿಕೆ ಕೃಷಿ ಧ್ವಂಸಗೊಳಿಸಿದೆ.
ಮೂರು ವರ್ಷಗಳಿಂದ ಕಾಡಾನೆ ಕೃಷಿ ಹಾನಿ ಮಾಡುತ್ತಿದೆ. ಪೆರ್ನಾಜೆ ವ್ಯಾಪ್ತಿಯ ಅರಣ್ಯ ಪ್ರದೇಶ ಭಾಗದಲ್ಲಿ ಲಕ್ಷಾಂತರ ಹಣ ವ್ಯಯಿಸಿ ನಿರ್ಮಿಸಿರುವ ಸೋಲಾರ್ ಬೇಲಿಯೂ ನಿಷ್ಪ್ರಯೋಜಕವಾಗಿದೆ. ಕಾಡಾನೆಗಳನ್ನು ಸ್ಥಳಾಂತರಿಸದೆ ಇದ್ದರೆ ಮುಂದೆ ಜೀವಕ್ಕೂ ಅಪಾಯವಾಗುವ ಸಂಭವ ಇದೆ ಎಂದು ಕೃಷಿಕರು ಆತಂತ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.