ADVERTISEMENT

ಮಂಗಳೂರು: ಫೇಸ್‌ಬುಕ್‌ನಲ್ಲಿ ಪೊಲೀಸ್‌ ಕಮಿಷನರ್ ಹೆಸರಿನಲ್ಲಿ ನಕಲಿ ಪ್ರೊಫೈಲ್‌!

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 6:33 IST
Last Updated 5 ನವೆಂಬರ್ 2025, 6:33 IST
ಮಂಗಳೂರು ಪೊಲೀಸ್‌ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ಹೆಸರಿನಲ್ಲಿ ಸೃಷ್ಟಿಸಲಾದ ನಕಲಿ ಪ್ರೊಫೈಲ್‌
ಮಂಗಳೂರು ಪೊಲೀಸ್‌ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ಹೆಸರಿನಲ್ಲಿ ಸೃಷ್ಟಿಸಲಾದ ನಕಲಿ ಪ್ರೊಫೈಲ್‌   

ಮಂಗಳೂರು: ನಗರ ಪೊಲೀಸ್‌ ಕಮಿಷನರ್‌ ಸುಧೀರ್ ಕುಮಾರ್‌ ರೆಡ್ಡಿ ಅವರ ಭಾವಚಿತ್ರವನ್ನು ಬಳಸಿಕೊಂಡು ಯಾರೋ ಕಿಡಿಗೇಡಿಗಳು ಫೇಸ್‌ಬುಕ್‌ನಲ್ಲಿ ನಕಲಿ ಫ್ರೊಫೈಲ್‌ ರಚಿಸಿದ್ದಾರೆ.

ನಕಲಿ ಫ್ರೊಫೈಲ್‌ ಕೂಡಾ ಮಂಗಳೂರು ಪೊಲೀಸ್‌ ಕಮಿಷನರ್ ಅವರ ಅಧಿಕೃತ ಫೇಸ್‌ಬುಕ್‌ ಪುಟದಂತೆಯೇ ಕಾಣಿಸುತ್ತಿದೆ.

ನಕಲಿ ಫ್ರೊಫೈಲ್‌ನ ಕೊಂಡಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡಿರುವ ಸುಧೀರ್‌ ಕುಮಾರ್ ರೆಡ್ಡಿ, ‘ನನ್ನ ಹೆಸರಿನಲ್ಲಿರುವ ಈ ಪ್ರೊಫೈಲ್‌ ಅನ್ನು ಸೈಬರ್ ವಂಚನೆ ಉದ್ದೇಶದಿಂದ ಇತ್ತೀಚೆಗೆ ಸೃಷ್ಟಿಸಿದಂತೆ ತೊರುತ್ತಿದೆ. ಇದನ್ನು ನಂಬಿ ಮೋಸ ಹೋಗಬೇಡಿ’ ಎಂದು ತಿಳಿಸಿದ್ದಾರೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.